Advertisement

ಚಿಂತನ ಶಿಬಿರಕ್ಕಾಗಿ ಒಂದಾದ ಕಾಂಗ್ರೆಸ್‌

12:58 AM Apr 26, 2022 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಬಲಪಡಿಸುವ ನಿಟ್ಟಿನಲ್ಲಿ ಚುನಾವಣ ಚತುರ ಪ್ರಶಾಂತ್‌ ಕಿಶೋರ್‌ ಸಂಪರ್ಕದಲ್ಲಿರುವ ಪಕ್ಷದ ವರಿಷ್ಠರು, ರಾಜಸ್ಥಾನದಲ್ಲಿ ನಡೆಯಲಿರುವ ಚಿಂತನ ಶಿಬಿರಕ್ಕಾಗಿ “ನಾವೆಲ್ಲರೂ ಒಂದಾಗಿದ್ದೇವೆ’ ಎಂಬ ಸಂದೇಶ ರವಾನಿಸಲು ಸಿದ್ಧತೆ ನಡೆಸಿದ್ದಾರೆ.

Advertisement

ಮೇ 13ರಿಂದ 15ರ ವರೆಗೆ ಉದಯಪುರದಲ್ಲಿ ಚಿಂತನ ಶಿಬಿರ ನಡೆಯಲಿದ್ದು, ಇದಕ್ಕಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ  ಆರು ಸಮನ್ವಯ ಸಮಿತಿಗಳನ್ನು ರಚಿಸಿದ್ದಾರೆ. ಇದಕ್ಕೆ ಪ್ರಮುಖವಾಗಿ ಬಂಡಾಯ ಗುಂಪು ಎಂದೇ ಗುರುತಿಸಿಕೊಂಡಿರುವ ಜಿ23 ನಾಯಕರನ್ನು ಸೇರಿಸಿಕೊಳ್ಳಲಾಗಿದೆ. ಸಮನ್ವಯ ತಂಡಗಳಲ್ಲಿ ಜಿ 23ರ ಗುಲಾಂ ನಬಿ ಆಜಾದ್‌, ಶಶಿ ತರೂರ್‌, ಮುಕುಲ್‌ ವಾಸ್ನಿಕ್‌, ಭೂಪಿಂದರ್‌ ಸಿಂಗ್‌ ಹೂಡಾ, ಆನಂದ್‌ ಶರ್ಮ, ಮನೀಶ್‌ ತಿವಾರಿ, ಅಖಿಲೇಶ್ ಪ್ರಸಾದ್‌ ಸಿಂಗ್‌ ಅವರಿದ್ದಾರೆ.

ವಾಸ್ನಿಕ್‌ ಮತ್ತು ಭೂಪಿಂದರ್‌ ಸಿಂಗ್‌ ಹೂಡಾ ಅವರನ್ನು  ಸಂಘಟನಾತ್ಮಕ ಹಾಗೂ ರೈತ ಮತ್ತು ಕೃಷಿ ಸಮನ್ವಯ ಸಮಿತಿ ಸಂಚಾಲಕರನ್ನಾಗಿ  ಮಾಡಲಾಗಿದ್ದು, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಇರಾದೆ ಸೋನಿಯಾ  ಅವರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next