Advertisement

ರೈತ ಹೋರಾಟದಲ್ಲಿ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕಾರಣ: ಕಟೀಲ್ ವಾಗ್ದಾಳಿ

03:35 PM Sep 29, 2020 | keerthan |

ಬೆಳಗಾವಿ: ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹೋರಾಟದಲ್ಲಿ ಕಾಂಗ್ರೆಸ್ ಕೀಳು ರಾಜಕೀಯ ಮಾಡುತ್ತಿದೆ‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

Advertisement

ಇತ್ತೀಚೆಗೆ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ದಿ.‌ ಸುರೇಶ ಅಂಗಡಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ರೈತರನ್ನು ಎತ್ತಿಕಟ್ಟಿ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜಕಾರಣಕ್ಕೋಸ್ಕರ ದ್ವೇಷ ಹುಟ್ಟಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲೇ ಈ ಎಲ್ಲ ಕಾಯ್ದೆಗಳನ್ನು ತರಬೇಕು ಅಂತ ಹೇಳಿತ್ತು. ಅತ್ಯುತ್ತಮವಾಗಿರುವ ರೈತರ ಪರವಾಗಿರುವ ಕಾಯ್ದೆ ಇದು. ಹೋರಾಟ ಮಾಡುವವರ ಬೇಡಿಕೆ ರೈತರಿಗೆ ನೇರವಾಗಿರುವ ಮಾರುಕಟ್ಟೆ ಕೊಡಿ ಅಂತ ಇತ್ತು. ಅವರ ಬೇಡಿಕೆ ಅಂತೆ ಸರ್ಕಾರ ಕಾಯ್ದೆ ಮಾಡಿದೆ. ರೈತರಿಗೆ ಮನದಟ್ಟು ಮಾಡುವ ಕೆಲಸ ಪಕ್ಷದಿಂದ ಮಾಡುತ್ತೇವೆ. ಕಾಂಗ್ರೆಸ್ ಇದರ ಮಧ್ಯೆ ಬೆಂಕಿ ಹಾಕಿ ಬೆಳೆ ಬೇಯಿಸಿಕೊಳ್ಳುವ ಮಾಡದಿರಲಿ ಎಂದರು.

ಇದನ್ನೂ ಓದಿ:ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕೋದು; ಇದ್ದಾಗ ಭ್ರಷ್ಟಾಚಾರ ಮಾಡೋದು ‘ಕೈ’ ಕೆಲಸ: ಕಟೀಲ್ ಕಿಡಿ

ಶಿರಾ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷ ಎಲ್ಲವನ್ನೂ ಗಮನಿಸಿ ಯೋಚನೆ ಮಾಡಿಕೊಂಡು ತೀರ್ಮಾನ ಮಾಡುತ್ತದೆ. ನಾಲ್ಕೈದು ಹೆಸರುಗಳು ಕೇಳಿ ಬಂದಿದ್ದು ಪರಿಶೀಲನೆ ಮಾಡುತ್ತಿದ್ದು ನಮ್ಮ ಕೆಲಸ ಕಾರ್ಯ ಆರಂಭವಾಗಿವೆ. ಶಿರಾದಲ್ಲಿ ಬಿಜೆಪಿ ಗೆಲುವಿನ ವಾತಾವರಣ ಕಂಡು ಬರುತ್ತಿದೆ. ಹತ್ತರಿಂದ ಹದಿನೈದು ದಿನಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುವುದು ಎಂದರು.

Advertisement

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next