Advertisement
ಕಾಂಗ್ರೆಸ್ ಈಗಾಗಲೇ 5 ಗ್ಯಾರಂಟಿ ಗಳನ್ನು ಘೋಷಿಸಿದ್ದು, ಆ ಪೈಕಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೂಡ ಒಂದಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನಡೆಯ ಲಿರುವ ಮೊದಲ ಸಚಿವ ಸಂಪುಟ ಸಭೆ ಯಲ್ಲಿ ಉಚಿತ ವಿದ್ಯುತ್ ಘೋಷಣೆ ಯನ್ನು ಅಂಗೀಕರಿಸುವ ಸಾಧ್ಯತೆ ಇದೆ. ಆದರೆ ಸರಕಾರ ವಿದ್ಯುತ್ ಉಚಿತ ವಾಗಿ ಕೊಟ್ಟರೂ ಗ್ರಾಹಕರಿಗೆ ನಿಗದಿತ ಶುಲ್ಕದ ರೂಪದಲ್ಲಿ ಬಿಲ್ ಪಾವತಿ ಸುವುದರಿಂದ ಮುಕ್ತಿ ಸಿಗುವುದು ಅನುಮಾನ.
Related Articles
ಈ ಮಧ್ಯೆ ಷರತ್ತುಗಳ ಸುಳಿವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. 200 ಯೂನಿಟ್ ದಾಟಿದವರಿಗೆ ಅಂದರೆ, ಉದಾಹರಣೆಗೆ, 201 ಯೂನಿಟ್ ಬಳಕೆಯಾಗಿದ್ದರೆ ಪೂರ್ತಿ ಬಿಲ್ ಪಾವತಿಸಬೇಕಾಗುತ್ತದೆಯೇ? 250 ಯೂನಿಟ್ ಬಳಕೆಯಾಗಿದ್ದರೆ ಕೇವಲ 50 ಯೂನಿಟ್‌ಗೆ ಬಿಲ್ ಪಾವತಿಸಿದರೆ ಸಾಕೇ? ಬಿಪಿಎಲ್‌ನವರಿಗೆ ಮಾತ್ರ ಇದು ಅನ್ವಯವೇ? -ಇಂತಹ ಹಲವು ಗೊಂದಲಗಳಿಗೆ ಶನಿವಾರ ತೆರೆಬೀಳುವ ಸಾಧ್ಯತೆ ಇದೆ.
Advertisement
100 ಯೂನಿಟ್‌ಗಿಂತ ಕಡಿಮೆ ಬಳಕೆದಾರರು 1 ಕೋಟಿ200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಘೋಷಣೆಯಿಂದ ಗ್ರಾಹಕರಿಗೆ ಅನುಕೂಲ ಆಗುವುದಿಲ್ಲ ಎಂದಲ್ಲ; ರಾಜ್ಯದಲ್ಲಿ 1.92 ಕೋಟಿ ಗೃಹ ಬಳಕೆದಾರರಿದ್ದಾರೆ. ಅವರಲ್ಲಿ ಸುಮಾರು ಶೇ. 50ರಷ್ಟು ಅಂದರೆ ಒಂದು ಕೋಟಿ ಗ್ರಾಹಕರು ತಿಂಗಳಿಗೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವವರೇ ಇದ್ದಾರೆ. ಅವರೆಲ್ಲರಿಗೂ ಯೋಜನೆಯಿಂದ ಪ್ರಯೋಜನವಾಗಲಿದೆ. ಆದರೆ ಸರಕಾರ ಯಾವ ರೀತಿಯ ಷರತ್ತುಗಳನ್ನು ವಿಧಿಸುತ್ತದೆ ಎನ್ನುವುದನ್ನು ಕಾದು ನೋಡ ಬೇಕು ಎಂದು ಕೆಇಆರ್‌ಸಿ ಸಲಹಾ ಸಮಿತಿ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್ ತಿಳಿಸಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಗೃಹಬಳಕೆಗೆ ವಾರ್ಷಿಕ 14,089 ದಶ ಲಕ್ಷ ಯೂನಿಟ್‌ಗೆ ಅನುಮೋದನೆ ನೀಡಲಾ ಗಿದೆ. ಪ್ರತೀ ಯೂನಿಟ್‌ಗೆ 9.12 ರೂ. ವೆಚ್ಚ ಆಗುತ್ತದೆ. 14,089 ದಶ ಲ ಕ್ಷ ಯೂನಿಟ್‌ಗೆ ಲೆಕ್ಕ ಹಾಕಿದರೆ 12,849 ಕೋಟಿ ರೂ. ಆಗುತ್ತದೆ. ಇದರಲ್ಲಿ ಅರ್ಧಕ್ಕರ್ಧ ಗ್ರಾಹಕರು 100 ಯೂನಿಟ್‌ಗಿಂತ ಕಡಿಮೆ ಬಳಸುವವರು ಎಂದಾದರೆ, ಅಂದಾಜು 6,400 ಕೋ. ರೂ. ಆಗುತ್ತದೆ. ಇದರ ಜತೆಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಪಂಪ್‌ಸೆಟ್‌ಗಳಿಗೆ ನೀಡಿದ ವಿದ್ಯುತ್‌ಗೆ ಪ್ರತಿಯಾಗಿ ವಾರ್ಷಿಕ ಸುಮಾರು 14,500 ಕೋ. ರೂ. ಆಗುತ್ತದೆ. ಇದರ ಹಳೆಯ ಬಾಕಿ ಕೂಡ ಸಾವಿರಾರು ಕೋ. ರೂ. ಇದೆ ಎಂದೂ ಹೇಳಿದ್ದಾರೆ. ವಿಜಯ ಕುಮಾರ ಚಂದರಗಿ