ಬೆಂಗಳೂರು: ಕಾಂಗ್ರೆಸ್ ನವರು ಮಾಡುತ್ತಿರುವುದು ಬೀದಿ ನಾಟಕ. ಇದನ್ನು ನಾನು ಖಂಡಿಸುತ್ತೇವೆ. ರಾಜ್ಯದಲ್ಲಿ ಕೋವಿಡ್ ತುರ್ತು ಪರಿಸ್ಥಿತಿಯಿದೆ. ಈಗ ಪಾದಯಾತ್ರೆ ಮಾಡಿದರೆ ಕೊರೊನಾ ಜಾಸ್ತಿಯಾಗುತ್ತದೆ. ಆದರೆ ಚುನಾವಣೆಗೋಸ್ಕರ ಕಾಂಗ್ರೆಸ್ ಬೀದಿ ನಾಟಕ ಮಾಡುತ್ತಿದೆ ಎಂದು ಸಚಿವ ಡಾ. ಸುಧಾಕರ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ನವರು ಕಾವೇರಿಗೆ ಮಾಡುತ್ತಿರುವ ಅಪಮಾನ. ಬಿಬಿಎಂಪಿ ಚುನಾವಣೆ ಗುರಿಯಾಗಿಟ್ಟುಕೊಂಡು ಬೀದಿ ನಾಟಕ ಶುರುಮಾಡಿದ್ದಾರೆ. ಇದು ನನಗೆ ಖೇಧ ಉಂಟುಮಾಡಿದೆ. ಇದಕ್ಕೆ ನನ್ನ ಧಿಕ್ಕಾರವಿದೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ. ಮೇಕೆದಾಟುಗೆ ಏನೆ ಒಳ್ಳೆಯ ಕೆಲಸ ಆಗಬೇಕೆಂದರೆ ಅದು ಬಿಜೆಪಿಯಿಂದ ಅದರಲ್ಲೂ ಬೊಮ್ಮಾಯಿ ಸರ್ಕಾರದಿಂದ ಮಾತ್ರ ಎಂದರು.
ಇದನ್ನೂ ಓದಿ:ಶಿವಕುಮಾರ್ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಡಿಕೆಶಿ ಜಾರಿದ್ದಕ್ಕೆ ಬಿಜೆಪಿ ಲೇವಡಿ
ರಾಜ್ಯದಲ್ಲಿ ಬರುವ ಕೋವಿಡ್ ಕೇಸ್ ಸುಳ್ಳು ಹೇಳುತ್ತಿದ್ದಾರೆಂಬ ಡಿಕೆ ಶಿವಕಮಾರ್ ಆರೋಪಕ್ಕೆ ತಿರುಗೇಟು ನೀಡಿದ ಸುಧಾಕರ್, ಮಹಾರಾಷ್ಟ್ರದಲ್ಲಿ ಅಷ್ಟೊಂದು ಕೇಸ್ ಗಳು ಬರುತ್ತಿದೆಯಲ್ಲಾ, ಹಾಗಾದರೆ ಅದು ಸುಳ್ಳೆ? ನಾವೇನಾದರೂ ಅಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಮಾಡಿ ಎಂದು ಹೇಳಿದ್ದೇವಾ? ಅಲ್ಲಿರೋದು ನಿಮ್ಮದೇ ಸರ್ಕಾರವಲ್ಲವೇ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ನ ಬೀದಿ ನಾಟಕವನ್ನು ಜನರು ನೋಡುತ್ತಿದ್ದಾರೆ. ಯುವಕರಿದ್ದಾರೆ ನೋಡ್ಕೊಳ್ತಾರೆ ಎಂದು ಸುಧಾಕರ್ ಪಾದಯಾತ್ರೆಯನ್ನು ಖಂಡಿಸಿದರು.