Advertisement

ಆಳಂದ: ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನ

11:52 AM Mar 31, 2022 | Team Udayavani |

ಕಲಬುರಗಿ: ರಾಜ್ಯ ಕಾಂಗ್ರೆಸ್‌ ಪಕ್ಷದ ವತಿಯಿಂದ ಮಾ.31ರೊಳಗಾಗಿ 50 ಲಕ್ಷ ಸದಸ್ಯತ್ವ ಗುರಿಯೊಂದಿಗೆ ಹಮ್ಮಿಕೊಂಡಿರುವ ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ನೋಂದಣಿ ಅಭಿಯಾನ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಭರದಿಂದ ಸಾಗಿದೆ.

Advertisement

ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾರ್ಗದರ್ಶನದಲ್ಲಿ ಆರಂಭವಾಗಿರುವ ಅಭಿಯಾನ ವೇಗದಲ್ಲಿ ಸಾಗಿದೆ. ಪ್ರತಿ ಹೋಬಳಿ, ಹಳ್ಳಿಗಳಿಗೆ ಹೋಗುತ್ತಿರುವ ಪಕ್ಷದ ಯುವ ಕಾರ್ಯಕರ್ತರು ಮತದಾರರ ಪಟ್ಟಿಯಂತೆ ಮತದಾರ ಗುರುತಿನ ಚಿಟ್ಟಿ ಜನರಿಂದ ಪಡೆದು ಅವರ ಮನೆಗಳಿಗೆ ತೆರಳಿ ಡಿಜಿಟಲ್‌ ಸದಸ್ಯತ್ವ ನೋಂದಣಿ ಅಭಿಯಾನ ಮುನ್ನಡೆಸುತ್ತಿದ್ದಾರೆ.

ವಿವಿಧ ಗ್ರಾಮಗಳಿಗೆ ಕೆಪಿಸಿಸಿ ಸದಸ್ಯರಾದ ಹಣಮಂತರಾವ ಭೂಸನೂರ್‌, ಆಳಂದ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸವ (ಚಿನ್ನು) ಪಾಟೀಲ, ನೋಂದಣಿ ಸಮನ್ವಯಕಾರ ಗಣೇಶ ಪಾಟೀಲ, ಹಿರಿಯರಾದ ವೈಜನಾಥ ಪಾಟೀಲ, ಸಿದ್ಧು ಪಾಟೀಲ, ಯುವ ಮುಖಂಡರಾದ ಲಿಂಗರಾಜು ಪಾಟೀಲ, ಪಿಂಟುಗೌಡ ಪಡಸಾವಳಗಿ ಹಾಗೂ ಇನ್ನಿತರರು ವಿವಿಧ ಹಳ್ಳಿ, ಹೋಬಳಿಗಳಿಗೆ ಸುತ್ತಾಡಿ ಜನರ ಮನೆ, ಮಳಿಗೆಗಳಿಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಿದರು.

ಕಡಗಂಚಿಯಲ್ಲಿ ಶರಣು ಭೂಸನೂರ್‌ ನೇತೃತ್ವ ವಹಿಸಿದ್ದರು. ಮಾ. 31ರ ವರೆಗೂ ಡಿಜಿಟಲ್‌ ಸದಸ್ಯತ್ವ ಅಭಿಯಾನ ನಡೆಯಲಿದೆ. ಪ್ರತಿ ಮತಗಟ್ಟೆಗೆ ಇಬ್ಬರು ನೋಂದಣಿದಾರರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್‌ ಬಗ್ಗೆ ನಂಬಿಕೆ, ವಿಶ್ವಾಸ ಇರುವವರನ್ನು ನೋಂದಣಿ ಮಾಡಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next