Advertisement

BJP ಶಾಸಕ, ಸಂಸದರ ಮೇಲೆ ಕ್ರಮಕ್ಕೆ ಕಾಂಗ್ರೆಸ್‌ ಆಗ್ರಹ; ನಗರದ ಪೊಲೀಸ್‌ ಆಯುಕ್ತರಿಗೆ ದೂರು

06:31 PM Jul 09, 2024 | Team Udayavani |

ಮಂಗಳೂರು: ರಾಹುಲ್ ಗಾಂಧಿಯವರ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಶಾಸಕರಾದ ಡಾ. ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಇತರ ಕಾರ್ಪೋರೇಟರ್‌ಗಳ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಕಮಿಷನರ್ ಅನುಪಮ್ ಅಗರ್‌ವಾಲ್ ಅವರಿಗೆ ಮನವಿ ಮಾಡಿದೆ.

Advertisement

ಬಿಜೆಪಿ ಶಾಸಕರು ಹಾಗೂ ಸಂಸದರ ನಾಯಕರು ಸೋಮವಾರ ಮಂಗಳೂರು ನಗರದಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾಡಿದ ಭಾಷಣದ ರೆಕಾರ್ಡಿಂಗ್‌ ಪ್ರತಿಗಳನ್ನು ಕಮಿಷನರ್‌ ಅವರಿಗೆ ನೀಡಿ ಸ್ವಯಂ ಪ್ರೇರಿತ ಕೇಸು ದಾಖಲಿಸಿ, ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಮುಖಂಡರು ಒತ್ತಾಯಿಸಿದ್ದಾರೆ.

ಕೆಪಿಸಿಸಿ ವಕ್ತಾರರಾದ ಎಂ.ಜಿ.ಹೆಗಡೆ, ಕೆಪಿಸಿಸಿ ಸದಸ್ಯೆ ಅಪ್ಪಿ, ಪ್ರಮುಖರಾದ ಚಂದ್ರಕಲಾ ರಾವ್‌, ಮಾಜಿ ಮೇಯರ್‌ ಅಶ್ರಫ್‌, ಸುಹಾನ್‌ ಆಳ್ವ, ಭಾಸ್ಕರ್‌ ರಾವ್‌, ಎಸ್‌.ಎಂ.ಸಲೀಂ, ಟಿ.ಹೊನ್ನಯ್ಯ, ಸಾಹುಲ್‌ ಹಮೀದ್‌, ಮನೀಶ್‌ ಬೋಳಾರ್‌, ಶೋಭಾ ಕೇಶವ, ಎನ್‌.ಪಿ.ಮನುರಾಜ್‌, ಮೀನಾ ಟೆಲ್ಲಿಸ್‌, ಹಬೀಬುಲ್ಲ ಕಣ್ಣೂರು, ಮಿಲಾಜ್‌ ಅತ್ತಾವರ ಉಪಸ್ಥಿತರಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಮಿಷನರ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next