ಹುಬ್ಬಳ್ಳಿ: ಹಾವೇರಿ ಜಿಲ್ಲೆ ಸಂಗೂರ ಸಕ್ಕರೆ ಕಾರ್ಖಾನೆ ತನ್ನದೇ ಆದ ಇತಿಹಾಸವಿದೆ. ಆ ಫ್ಯಾಕ್ಟರಿ ಮುಚ್ಚುವುದರಲ್ಲಿ ಕಾಂಗ್ರೆಸ್ ನವರ ಕೊಡುಗೆ ಬಹಳವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಗೂರನಲ್ಲಿ ರಿವ್ಯೂವ್ ಮಾಡಿ, ಈಗಾಗಲೇ ರೈತರ ಕಬ್ಬು ನುರಿಸುವ ಕೆಲಸ ಮಾಡಿದ್ದು ಬಿಜೆಪಿ ಸರ್ಕಾರ. ಹಿಂದೆ ಬಿಜೆಪಿ ಸರ್ಕಾರ ಅದನ್ನು ಸುಧಾರಿಸುವ ಕೆಲಸ ಮಾಡಿದೆ. ಅದರ ವಿವರವನ್ನು ಮೀಟಿಂಗ್ ನಲ್ಲಿ ನೀಡುತ್ತೇನೆ. 2400 ಕೋಟಿ ರೂ. ಹಾನಗಲ್ಲ ಗೆ ಕೊಟ್ಟಿದ್ದೇನೆ, ಹಾನಗಲ್ ಅಳಿಯ ಏನು ಕೊಟ್ಟಿದ್ದಾರೆ ಎನ್ನುವ ಸಿದ್ದರಾಮಯ್ಯನವರು 2400 ಕೋಟಿ ರೂ.ಯಾವುದಕ್ಕೆ, ಎಲ್ಲಿ ಕೊಟ್ಟಿದ್ದಾರೆ ಹೇಳಲಿ. ನಾವು ಏನು ಕೊಟ್ಟಿದ್ದೇವೆ ಎನ್ನುವುದನ್ನು ಹೇಳುತ್ತೇವೆ ಎಂದರು.
ಇದನ್ನೂ ಓದಿ:ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶರಣ ಬಸವ ಬಿಸರಳ್ಳಿ ನಿಧನ
ಆರ್ಥಿಕತೆಯ ಮೇಲೆ ತೈಲ ಬೆಲೆ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದ ಮೇಲೆ ಅವಕಾಶಗಳಿವೆ. ಆರ್ ಎಸ್ಎಸ್ ಹೊಗಳಿಕೆ ವಿಚಾರ ಬಗ್ಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ ಎಂದರು.
ಹಾನಗಲ್, ಸಿಂದಗಿ ಎರಡು ಕಡೆ ಹೆಚ್ಚಿನ ಸಮಯ ಕೊಟ್ಟು ಪ್ರಚಾರ ಮಾಡುತ್ತೇನೆ. ನನಗೆ ಸಂಪೂರ್ಣ ವಿಶ್ವಾಸವಿದೆ, ಎರಡು ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ ಎಂದರು.