Advertisement
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಬ್ಬ ಮನುಷ್ಯ ಸಾಯುವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂದರೆ ಮಾನಸಿಕವಾಗಿ ಆತ ಎಷ್ಟು ಕಟುವಾಗಿ ನಿರ್ಧರಿಸಬಹುದು ಎಂದು ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದರಲ್ಲದೆ, ಇದನ್ನೇ ಇಟ್ಟುಕೊಂಡು ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೂ ಆಗ್ರಹಿಸಿದ್ದರು. ಈಗ ಅವರಿಗೆ ಈ ನೀತಿ ಅನ್ವಯಿಸುವುದಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 1.5 ವರ್ಷ ಪೂರ್ಣಗೊಂಡಿದೆ. ಸಾಧನೆ ಏನೆಂದು ಅವಲೋಕನ ಮಾಡಿದರೆ, ಬೆಲೆ ಏರಿಕೆ, ಭ್ರಷ್ಟಾಚಾರ ಕಣ್ಮುಂದೆ ನಿಲ್ಲುತ್ತದೆ. ವಿದ್ಯುತ್ ದರ, ಹಾಲು, ಆಲ್ಕೋಹಾಲ್ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
Related Articles
Advertisement
ಸಭಾಪತಿಗಳಿಗೆ ಬಿಟ್ಟ ವಿಚಾರಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ತಮ್ಮ ನಡುವಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸಭಾಂಗಣದಲ್ಲಿ ತನಿಖೆ ಮಾಡುವ ಸಿಐಡಿ ಅಧಿಕಾರಿಗಳ ಪ್ರಸ್ತಾವನೆ ವಿಚಾರವನ್ನು ಸಭಾಪತಿಗಳು ತೀರ್ಮಾನಿಸುತ್ತಾರೆ. ಸಿಐಡಿ ಅಧಿಕಾರಿಗಳು ಮೇಲ್ಮನೆ ಕಾರ್ಯದರ್ಶಿಗೆ ಅವಕಾಶ ಕೋರಿ ಪತ್ರ ಬರೆದಿದ್ದರೆ, ಕಾರ್ಯದರ್ಶಿ ಮತ್ತು ಸಭಾಪತಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಿ.ಟಿ. ರವಿ ತಿಳಿಸಿದರು. ಪಿಎಸ್ಐ ಪರಶುರಾಮ್, ಲೆಕ್ಕಾಧಿಕಾರಿ ಚಂದ್ರಶೇಖರ್, ಬೆಳಗಾವಿಯಲ್ಲಿ ರುದ್ರೇಶ್ ಯಡವಣ್ಣವರ್ ಸೇರಿ ಹಲವು ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಸಚಿನ್ ಪಾಂಚಾಳ್, ಕೆಎಸ್ಡಿಎಲ್ ನೌಕರ ಅಮೃತ್ ಶಿರೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರಕಾರ ಆತ್ಮಹತ್ಯೆ ಭಾಗ್ಯ ನೀಡಿದೆ.
– ಸಿ.ಟಿ. ರವಿ, ವಿಧಾನಪರಿಷತ್ ಸದಸ್ಯ