Advertisement
ನಾಮಪತ್ರ ಸಲ್ಲಿಕೆಗೆ ಮುನ್ನ ವಿಜಯಪುರ ನಗರ ದೇವತಾ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಬೆಂಬಲಿಗರೊಂದಿಗೆ ವಾಹನಗಳಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.ಮಂಗಳವಾರ ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ಚುನಾವಣಾ ಅಧಿಕಾರಿಗಳ ಕಛೇರಿಗೆ ಆಗಮಿಸಿದ ಸುನಿಲಗೌಡ ಪಾಟೀಲ ಚುನಾವಣಾ ಅಧಿಕಾರಿ ಸುನಿಲಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದರು.
Related Articles
Advertisement
ವಿಜಯಪುರ ದ್ವಿಸದಸ್ಯತ್ವದ ಕ್ಷೇತ್ರವಾಗಿದ್ದರೂ ಕಾಂಗ್ರೆಸ್ ಈ ಬಾರಿಯೂ ಓರ್ವ ಅಭ್ಯರ್ಥಿಯನ್ನೇ ಕಣಕ್ಕಿಸಿದ್ದು, ಸುನಿಲಗೌಡ ಅವರಿಗೆ ಅವಕಾಶ ನೀಡಿದೆ. ಪಕ್ಷೇತರ ಎಂಎಲ್ಸಿ ಯತ್ನಾಳ ಅವರ ರಾಜಿನಾಮೆಯಿಂದ ಎದುರಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸುನಿಲಗೌಡ ಅವರನ್ನು ಸ್ಪರ್ಧೆಗೆ ಇಳಿಸಿ, ಗೆಲ್ಲಿಸಿತ್ತು.
ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಯಾಗಿ ಮಹಾಂತೇಶ ಕವಟಗಿಮಠ ನಾಮಪತ್ರ ಸಲ್ಲಿಕೆ
ಇನ್ನೊಂದು ಸ್ಥಾನದಲ್ಲಿ ಸತತ ನಾಲ್ಕು ಬಾರಿ ಸ್ಪರ್ಧಿಸಿ ಗೆದ್ದಿದ್ದ ಎಸ್.ಆರ್.ಪಾಟೀಲ, ಹಾಲಿ ಮೇಲ್ಮನೆಯ ವಿಪಕ್ಷ ನಾಯಕರು. ಆದರೆ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಒಂದಕ್ಕೆ ಮಾತ್ರ ಸ್ಪರ್ಧಿಸಲು ನಿರ್ಧರಿಸಿ, ಯುವಕ ವಿಜಯಪುರ ಜಿಲ್ಲೆಯ ಸುನಿಲಗೌಡ ಅವರಿಗೆ ಟಿಕೆಟ್ ನೀಡಿ, ಸ್ಪರ್ಧೆಗಿಳಿಸಿದೆ. ಇದರಿಂದ ಹಿರಿಯ ಸದಸ್ಯ ಬಾಗಲಕೋಟೆ ಜಿಲ್ಲೆಯ ಎಸ್.ಆರ್.ಪಾಟೀಲ ಅವರಿಗೆ ಕಾಂಗ್ರೆಸ್ ಕೋಕ್ ನೀಡಿದೆ.
ಹೀಗಾಗಿಯೇ ಅತೃಪ್ತ ಎಸ್.ಆರ್.ಪಾಟೀಲ ಅವರು ಸುನಿಲಗೌಡ ಅವರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಗೈರಾಗಿದ್ದು, ಚರ್ಚೆಗೆ ಕಾರಣವಾಗಿದೆ.