Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎನ್ನುವ ಮೂಲಕ ಅವರು ತಾವು ಧಾರವಾಡ ಲೋಕಸಭೆ ಅಭ್ಯರ್ಥಿಯಾಗಲು ಮನಸ್ಸಿಲ್ಲ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ನೀಡಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆರೇಳು ಬಾರಿ ಸೋಲುಂಡಿದೆ.ಈ ಬಾರಿ ಅಷ್ಟು ಸುಲಭಕ್ಕೆ ಅವರನ್ನು ಗೆಲ್ಲಲುಬಿಡುವುದಿಲ್ಲ. ಒಳ್ಳೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ವಿರುದ್ಧ ಕಠಿಣ ಹೋರಾಟ ರೂಪಿಸುತ್ತೇವೆ. ಈಗಾಗಲೇ 15 ಕ್ಕೂ ಜನ ಆಕಾಂಕ್ಷಿಗಳು ಟಿಕೇಟ್ ಗಾಗಿ ಚುನಾವಣಾ ಉಸ್ತುವಾರಿ ಅಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಂತಿಮವಾಗಿ ಯಾರು ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ” ಎಂದರು.
Related Articles
Advertisement
ಹಿಜಾಬ್ ಬಗ್ಗೆ ವಿರೋಧ ಪಕ್ಷಗಳು ವಿರೋಧ ಮಾಡುತ್ತವೆ ಮಾಡಲಿ. ನಾನೂ ಒಬ್ಬ ಹಿಂದೂ ಅಲ್ಲವಾ? ನಾನೇನು ಅದಕ್ಕೆ ವಿರೋಧ ಮಾಡುತ್ತಿಲ್ಲ. ಮಾಧ್ಯಮದಲ್ಲೂ ಹಿಂದೂಗಳಿದ್ದಾರೆ ಅವರೂ ವಿರೋಧ ಮಾಡುತ್ತಾರಾ? ನಿಮ್ಮ ನಿಲುವು ಏನು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ಮುಸ್ಲಿಂ ತುಷ್ಟೀಕರಣ ಎಂಬುದು ವಿರೋಧ ಪಕ್ಷಗಳ ದೃಷ್ಟಿಕೋನ ಆಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಏನು ? ಹಿಂದೂ, ಮುಸ್ಲಿಂ, ಸಿಖ್, ಬುದ್ಧ ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳುತ್ತೇವೆ ಎಂಬುದಲ್ಲವೇ ? ಎಂದರು.
ಹಿಜಾಬ್ ನಿಷೇಧ ವಾಪಸ್ ಸೇರಿದಂತೆ ಇತರೆ ನಿಯಮಗಳನ್ನು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತೇವೆ. ಸಂವಿಧಾನ ಬದ್ಧವಾಗಿ ಯಾವ ರೀತಿ ಇರಬೇಕು ಅಂತಿದೆಯೋ ಅದೇ ರೀತಿ ಮಾಡುತ್ತಾರೆ. ಅದೇ ರೀತಿಯಲ್ಲಿ ಮಾಡಲು ಸಿಎಂ ಪರಿಶೀಲಿಸುತ್ತಿದ್ದಾರೆ ಎಂದರು.