Advertisement

ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮಹಿಳೆಯರ ಮೇಲೆ ನೋಟಿನ ಮಳೆ

09:13 PM Dec 15, 2021 | Team Udayavani |

ಗದಗ:  ಗದಗ- ಬೆಟಗೇರಿ ನಗರಸಭೆ ಚನಾವಣಾ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆಯರ ಮೇಲೆ ನೋಟಿನ ಮಳೆ ಸುರಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ನಗರದ ವಾರ್ಡ್ ನಂ. 31ರ ಕಾಂಗ್ರೆಸ್ ಅಭ್ಯರ್ಥಿ ಗೀತಾಬಾಯಿ ಕೃಷ್ಣಸಾ ಹಬೀಬ ಅವರು ನಾಮಪತ್ರ ಸಲ್ಲಿಕೆಗೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಟೋಪಿ ಧರಿಸಿರುವ ಇಬ್ಬರು ಮಹಿಳೆಯರು ಬ್ಯಾಂಡ್ ಬಾಜಾ ಸದ್ದಿಗೆ ಸ್ಟೆಪ್ ಹಾಕುತ್ತಿದ್ದರೆ, ಈ ವೇಳೆ ಅಲ್ಲೇ ಇದ್ದ ಕೆಲವರು ಅವರ ಮೇಲೆ ನೋಟುಗಳನ್ನು ಎಸೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದು ಕಾಂಗ್ರೆಸ್ ಸಂಸ್ಕೃತಿ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : ಪ್ರವಾಹದಿಂದ ನೊಂದವರಿಗೆ ಪರಿಹಾರ ನೀಡಿ ಶಾಸಕರ ಮರ್ಯಾದೆ ಉಳಿಸಿ : ಶಿವಲಿಂಗೇಗೌಡ

Advertisement

Udayavani is now on Telegram. Click here to join our channel and stay updated with the latest news.

Next