Advertisement
ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಬಿರು ಸಿನ ಪ್ರಚಾರ ನಡೆಸಿ, ನಂತರ ನಡೆದ ಬಣಜಿಗ ಸಮುದಾಯದ ಸಭೆಯಲ್ಲಿ ಮಾತನಾಡಿ, ನನ್ನ ಅವಧಿಯಲ್ಲಿ ನಾಗಮಂಗಲ ಪಟ್ಟಣ ಸೇರಿ ತಾಲೂಕು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಇದಕ್ಕೆ ನೀವು ನೀಡಿದ್ದ ಬೆಂಬಲವೇ ಕಾರಣ ಎಂದು ಹೇಳಿದರು.
Related Articles
Advertisement
ಕೈ ಸರ್ಕಾರಕ್ಕೆ ಅಧಿಕಾರಕ್ಕೆ: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪರ ಅಲೆ ಎದ್ದಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಜನರು ಬೇಸತ್ತು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ತವಕದಲ್ಲಿದ್ದಾರೆ. ಹಾಗಾಗಿ, ನಮ್ಮ ಪಕ್ಷದ ಸರ್ಕಾರ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಜನತೆಗೆ ಗೊತ್ತಿದೆ: ನಂತರ ಮಾತನಾಡಿದ ಸಮುದಾಯದ ಮುಖಂಡರು, ಚಲುವರಾಯಸ್ವಾಮಿ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿರುವಂತಹ ಹಲವು ಸರ್ಕಾರಿ ಕಚೇರಿ ಕಟ್ಟಡಗಳು, ಹೊಸದಾಗಿ ಶಾಲಾ ಕಾಲೇಜುಗಳು, ಆರೋಗ್ಯ ಕೇಂದ್ರಗಳು, ಪಶು ಆಸ್ಪತ್ರೆಗಳನ್ನು ತಾಲೂಕಿಗೆ ತಂದಿರುವುದು ಜನತೆಗೆ ಗೊತ್ತಿದೆ ಎಂದು ವಿವರಿಸಿದರು.
ಅಷ್ಟು ಮಾತ್ರವಲ್ಲದೆ, ಪಟ್ಟಣದಿಂದ ಹೊರಹೋಗುವ ಎಲ್ಲಾ ಪ್ರಮುಖ ರಸ್ತೆ ಗಳನ್ನು ಅಭಿವೃದ್ಧಿಪಡಿಸಿದ್ದೀರಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಚಲುವರಾಯಸ್ವಾಮಿ ವಿರೋಧ ಪಕ್ಷದ ಶಾಸಕರಾಗಿದ್ದರೂ ನೀರಾವರಿ ಯೋಜನೆಗೆ 250 ಕೋಟಿ ರೂ. ಅನುದಾನ ತಂದು ಪಟ್ಟಣ, ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮುಖಂಡರಾದ ರಮೇಶ್, ತಿಮ್ಮಪ್ಪ, ಶಂಕರಪ್ಪ, ಡಿಷ್‌ಚಂದ್ರು, ನರಸಿಂಹ, ನಾರಾಯಣ ಹಲವರಿದ್ದರು.