Advertisement
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸಿ.ಟಿ.ರವಿ, ದಶಕಗಳ ಕಾಲ ಭಾರತ ಭಯೋತ್ಪಾದನೆಯಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಒಬ್ಬರು ಹಾಲಿ ಪ್ರಧಾನಿ ಹಾಗೂ ಒಬ್ಬರು ಮಾಜಿ ಪ್ರಧಾನಿಯನ್ನು ಕಳೆದುಕೊಂಡಿದೆ. ಭಯೋತ್ಪಾದಕರು ಅಥವಾ ಭಯೋತ್ಪಾದನೆ ಕೃತ್ಯದ ಬಗ್ಗೆ ಸಹಾನುಭೂತಿ ತೋರುವುದು ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟಂತೆಯೇ. ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತು. ಆ ದಿನ ಮುಖ್ಯಮಂತ್ರಿ ಕಾರ್ಯಕ್ರಮ ಅಲ್ಲಿತ್ತು, ಪ್ರಾಥಮಿಕ ತನಿಖೆ ಪ್ರಕಾರ ಮುಖ್ಯಮಂತ್ರಿ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ಎಸಗುವ ಉದ್ದೇಶವಿತ್ತು ಎಂದು ಹೇಳಲಾಗಿದೆ. ಹೀಗಿರುವಾಗ ಈ ಮನೆಯ ಹಿರಿಯ ಸದಸ್ಯರು, ಪಕ್ಷವೊಂದರ ರಾಜ್ಯಾಧ್ಯಕ್ಷರು ಭಯೋತ್ಪದಕನ ಬಗ್ಗೆ ಸಹಾನುಭೂತಿ ತೋರಿ ಮಾತನಾಡಿದ್ದಾರೆ. ದೇಶದ ಭದ್ರತೆಗೆ ಇಂತಹ ಹೇಳಿಕೆಗಳು ಅಪಾಯಕಾರಿ, ಯಾರೂ ಇಂತಹ ಮಾತು ಆಡಬಾರದು. ಭಯೋತ್ಪಾದನೆ ಮಟ್ಟ ಹಾಕುವ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದರು.
Related Articles
Advertisement
ಇದಕ್ಕೆ ಬಿಜೆಪಿಯ ಈಶ್ವರಪ್ಪ, ಆರವಿಂದ ಲಿಂಬಾವಳಿ ಸಹಿತ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಯಾವ ರೀತಿಯ ದುರುದ್ದೇಶ ಇರಲು ಸಾಧ್ಯ ಎಂದರು. ಆರವಿಂದ ಲಿಂಬಾವಳಿ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಎಂದರೆ ಗೊತ್ತಾಗುವುದಿಲ್ಲವೇ? ಅವರು ಸದನದಲ್ಲಿ ಇಲ್ಲದಿರುವಾಗ ಹೇಗೆ ಪ್ರಸ್ತಾಪ ಮಾಡುತ್ತೀರಿ ಎಂದರು.
ಸಿ.ಟಿ.ರವಿ, ನಾನು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೇನೆ, ಯಾರ ಹೆಸರೂ ಪ್ರಸ್ತಾಪ ಮಾಡಿಲ್ಲ. ಆದರೂ ಇದರಲ್ಲಿ ಖಾದರ್ ಅವರು ಪೂರ್ವಾಗ್ರಹ ಪೀಡಿತರಾಗಿ ದುರುದ್ದೇಶ ಎಲ್ಲಿ ಹುಡುಕಿದರು. ನಾನು ಶಾರೀಕ್ ಮತ್ತು ಖಾದರ್ ಅವರನ್ನು ಒಂದೇ ತಕ್ಕಡಿಯಲ್ಲಿ ತೂಗಿಲ್ಲ. ನಾವು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದ್ದೇವೆ, ಉತ್ತಮರನ್ನು ಭುಜದ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಸಂಸ್ಕಾರ ನಮ್ಮದು. ನಾನು ಪಕ್ಷದ ರಾಜ್ಯಾಧ್ಯಕ್ಷರು ಆ ದಿನ ಆಡಿದ ಮಾತುಗಳ ಪೆನ್ ಡ್ರೆçವ್ ಕೊಡುತ್ತೇನೆ. ಸದನದಲ್ಲಿ ಹಾಕಿ ಕೇಳಿಸಿ, ಸಿದ್ದರಾಮಯ್ಯ ಅವರೇ ತೀರ್ಪು ಕೊಡಲಿ ಎಂದರು. ಆಗ ಸ್ಪೀಕರ್ ಇಲ್ಲಿ ನಾನೇ ತೀರ್ಪು ಕೊಡಬೇಕು. ಬೇರೆ ಯಾರಿಗೂ ನನ್ನ ಅಧಿಕಾರ ಕೊಡಬೇಡಿ ಎಂದು ಚಟಾಕಿ ಹಾರಿಸಿದರು.
ಸ್ಪೀಕರ್ ಕಾಗೇರಿ, ಭಯೋತ್ಪಾದನೆ ಕೃತ್ಯ ನಿಗ್ರಹ ಕುರಿತು ಸದನದಲ್ಲಿ ಚರ್ಚೆಯಾಗಿ ಸಂದೇಶ ರವಾನೆಯಾಗಬೇಕು. ಸಿ.ಟಿ.ರವಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಸೋಮವಾರದ ನಂತರ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.
ಸಿ.ಟಿ.ರವಿ ತುಂಬಾ ಚೆನ್ನಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಹೇಳಿದಂತೆಯೂ ಇರಬೇಕು, ಗೊತ್ತಾಗಲೂ ಬೇಕು. ಹೆಸರು ಮಾತ್ರ ಇಲ್ಲ. ಸಿ.ಟಿ.ರವಿ ಬುದ್ಧಿವಂತರು, ಸೀಜನ್ ಆಗಿದ್ದಾರೆ ಐ ಲೈಕ್ ಇಟ್.–ರಮೇಶ್ ಕುಮಾರ್, ಮಾಜಿ ಸ್ಪೀಕರ್