Advertisement

ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್‌-ಬಿಜೆಪಿ ಪೈಪೋಟಿ

12:59 PM Mar 15, 2021 | Team Udayavani |

ಹನೂರು: ಪಟ್ಟಣ ಪಂಚಾಯಿತಿ ಸದಸ್ಯ ನಾಗ ರಾಜು ಮರಣದಿಂದಾಗಿ ತೆರವಾಗಿ ರುವಪಪಂ 2ನೇ ವಾರ್ಡ್‌ಗೆ ಉಪ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಉಪಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು,ನಾಮಪತ್ರ ಸಲ್ಲಿಕೆಗೆ ಮಾ.17 ಅಂತಿಮ ದಿನವಾಗಿದೆ. ಮಾ.18 ರಂದು ನಾಮಪತ್ರಗಳಪರಿಶೀಲನೆ ಜರುಗ ಲಿದ್ದು ನಾಮಪತ್ರಹಿಂಪಡೆಯಲು ಮಾರ್ಚ್‌ 20ರವರೆಗೆಅವಕಾಶವಿದೆ. ಮತದಾನ ಅವಶ್ಯವಾಗಿದ್ದಲ್ಲಿಮಾ.29ಕ್ಕೆ ಚುನಾವಣೆ ನಿಗದಿಯಾಗಿದೆ.

ವಾರ್ಡ್‌ನ ಚಿತ್ರಣ: ಪಪಂನ 2ನೇ ವಾರ್ಡ್‌ ನಲ್ಲಿ 716 ಮತದಾರರಿದ್ದು ಮೀಸಲಾತಿಅನು ಸಾರ ಈ ವಾರ್ಡ್‌ ಸಾಮಾನ್ಯ ವರ್ಗಕ್ಕೆಮೀಸ ಲಾಗಿ ದೆ. ಆದರೆ, ಈ ವಾರ್ಡ್‌ನಲ್ಲಿ ಆದಿ ಬವ ಮತಗಳೇ ನಿರ್ಣಾಯಕವಾಗಲಿವೆ. ಇಲ್ಲಿನ 716 ಮತದಾರರ ಪೈಕಿ ಆದಿ ಜಾಂಬವ ಸಮುದಾಯದ 550 ಮತಗಳು, ಒಕ್ಕಲಿಗೆ ಸಮುದಾಯದ 95 ಮತಗಳು, ಪೌರ ಕಾರ್ಮಿಕರ 35 ಮತಗಳು ಮತ್ತುಪರಿಶಿಷ್ಟ ಜಾತಿಯ ಆದಿ ಕರ್ನಾಟಕಕ್ಕೆ ಸೇರಿದ 25 ಮತ ದಾರ ರಿದ್ದಾರೆ. ಈ ವಾರ್ಡ್‌ನಲ್ಲಿ ಆದಿಜಾಂಬವ ಮತಗಳೇ ಹೆಚ್ಚು ಮತಗಳಿರುವುದರಿಂದ ಸಾಮಾನ್ಯ ವರ್ಗಕ್ಕೆ ಸೇರಿದವರಿಗಿಂದ ಆ ಸಮು ದಾಯದನಾಯಕರೇ ಸ್ಫರ್ಧೆಗೆ ಒಲವು ತೋರಿದ್ದಾರೆ.

ಕಳೆದ ಚುನಾವಣೆ ಅಖಾಡ: 2019ರಲ್ಲಿಜರು ಗಿದ್ದ ಪ.ಪಂ ಚುನಾವಣೆಯಲ್ಲಿ 2ನೇ ವಾರ್ಡ್‌ ನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುದೇಶ್‌ ತಿಪ್ಪೂ ರಯ್ಯ, ಬಿಜೆಪಿಅಭ್ಯರ್ಥಿಯಾಗಿ ದಿ| ನಾಗ ರಾಜು ಮತ್ತುಜೆಡಿಎಸ್‌ ಅಭ್ಯರ್ಥಿ ಯಾಗಿ ಗೋವಿಂದ್‌ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜು 256 ಮತ ಪಡೆದು ವಿಜೇತರಾಗಿ ದ್ದರು. ಕಾಂಗ್ರೆಸ್‌ನಸುದೇಶ್‌ ತಿಪ್ಪೂರಯ್ಯ 231 ಮತ ಪಡೆದು 35 ಮತಗಳ ಅಂತರದಿಂದಪರಾಭವಗೊಂಡಿದ್ದರು. ಇನ್ನು ಜೆಡಿಎಸ್‌ನಗೋವಿಂದ 175 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಸ್ಪರ್ಧಾ ಕಣದಲ್ಲಿ ಯಾರ್ಯಾರು? :

Advertisement

ಉಪಚುನಾವಣೆಯ ಕಣಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಈಗಾಗಲೇ 3 ಪಕ್ಷಗಳೂ ತಯಾರಿ ನಡೆಸಿಕೊಂಡಿವೆ. ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದಸುದೇಶ್‌ ತಿಪ್ಪೂರಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗುವುದುಬಹುತೇಕ ಖಚಿತವಾಗಿದೆ. ಇನ್ನು ಕಳೆದ ಬಾರಿ ವಾರ್ಡನ್ನು ತನ್ನ ತೆಕ್ಕೆಗೆಪಡೆದಿದ್ದ ಬಿಜೆಪಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದು,ಆದಿಜಾಂಬವ ಸಮುದಾಯಕ್ಕೆ ಸೇರಿದ್ದ ಗುರು ಸ್ವಾಮಿಯನ್ನೇ ಅಖಾಡಕ್ಕಿಳಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇನ್ನು ಜೆಡಿಎಸ್‌ ಪಕ್ಷಒಡೆದ ಮನೆಯಂತಾಗಿದ್ದು, ಕಳೆದ 2 ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿರುವ ಗೋವಿಂದ ಮತ್ತು ಪ್ರಸ್‌ಸ್ವಾಮಿ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಈ ಇಬ್ಬರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಮತ್ತೋರ್ವರು ಅಸಮಾಧಾನಗೊಳ್ಳುವುದರಿಂದ ಪಕ್ಷದ ಮತಗಳಿಗೆ ಹೊಡೆತ ಬೀಳಲಿದೆ. ಈ ಹಿನ್ನೆಲೆ ಇಬ್ಬರನ್ನು ಹೊರತುಪಡಿಸಿ 3ನೇ ವ್ಯಕ್ತಿಗೆ ಟಿಕೆಟ್‌ ನೀಡಿ, ಒಂದೊಮ್ಮೆ ಅವಕಾಶ ಕಲ್ಪಿಸಿದರೆ ತಮ್ಮ ಪತ್ನಿಯನ್ನು ಅಖಾಡಕ್ಕೆ ಇಳಿಸುವುದಾಗಿ ಒಕ್ಕಲಿಗ ಸಮುದಾಯದ ಮುಖಂಡನೋರ್ವ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next