Advertisement
ದಿಲ್ಲಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟಿÉ, “ಫಿರ್ ಏಕ್ ಬಾರ್, ಮೋದಿ ಸರಕಾರ್’ ಎಂಬ ಉದ್ಘೋಷವನ್ನು ಬಿಡುಗಡೆ ಮಾಡಿದರು. ಇದರ ಜತೆಗೆ, “ಕಾಮ್ ಕರನೇ ವಾಲಿ ಸರಕಾರ್’ (ಕೆಲಸ ಮಾಡುವ ಸರಕಾರ), “ಇಮಾನ್‌ದಾರ್ ಸರಕಾರ್’ (ನಂಬಿಕೆಗೆ ಅರ್ಹವಾದ ಸರಕಾರ) ಮತ್ತು “ಬಡಾ ಫೈಸಲೇ ಲೇನೇವಾಲಿ ಸರಕಾರ್’ (ದೊಡ್ಡ ನಿರ್ಧಾರ ಕೈಗೊಳ್ಳಬಲ್ಲ ಸರಕಾರ) ಎಂಬ ಮೂರು ಥೀಮ್ ಹಾಡುಗಳನ್ನು ಅನಾವರಣಗೊಳಿಸಿದರು. “ಫಿರ್ ಏಕ್ ಬಾರ್ ಮೋದಿ ಸರಕಾರ್’ ಎಂಬ ಮತ್ತೂಂದು ಹಾಡನ್ನೂ ಇದೇ ವೇಳೆ ಬಿಡುಗಡೆ ಮಾಡಿದ ಅವರು, ಪ್ರಚಾರದ ವೇಳೆ ಅದೇ ಮುಖ್ಯ ಹಾಡು ಆಗಿರುತ್ತದೆ ಎಂದು ತಿಳಿಸಿದರು.
ಮತ್ತೂಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, “ಅಬ್ ಹೋಗಾ ನ್ಯಾಯ್’ ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡಿರುವುದಾಗಿ ಘೋಷಿಸಿದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ 5 ಕೋಟಿ ಕಡು ಬಡವರಿಗೆ ವಾರ್ಷಿಕ 72,000 ರೂ. ಆದಾಯ ನೀಡುವುದಾಗಿ (ನ್ಯಾಯ್ ಯೋಜನೆ) ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಘೋಷಿಸಿದ್ದನ್ನೇ ಆಧಾರವಾಗಿಟ್ಟುಕೊಂಡು ಈ ಘೋಷ ವಾಕ್ಯ ರಚಿಸಲಾಗಿದೆಯಾದರೂ, ಬಡವರಿಗೆ ಆದಾಯ ಕಲ್ಪಿಸುವುದಷ್ಟೇ ಅಲ್ಲ, ಸರ್ವರಿಗೂ ಸಿಗಬೇಕಿರುವ ಹಕ್ಕು, ಸೌಲಭ್ಯಗಳು ಸಿಗುವಂತೆ ಮಾಡುವುದು ಮತ್ತು ಈಗಿನ ಸರಕಾರದಿಂದ ಆಗಿರುವ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವುದೇ ಕಾಂಗ್ರೆಸ್‌ನ ಗುರಿಯಾಗಿದೆ’ ಎಂದು ಅವರು ತಿಳಿಸಿದರು. ಇದರ ಜತೆಗೆ, ಜಾವೇದ್ ಅಖ್ತರ್ ಅವರು ರಚಿಸಿರುವ ಥೀಮ್ ಸಾಂಗ್ ಮತ್ತು ನಿಖೀಲ್ ಆಡ್ವಾಣಿ ಸೆರೆಹಿಡಿದಿರುವ ಅಭಿಯಾನದ ವೀಡಿಯೋವನ್ನೂ ಬಿಡುಗಡೆ ಮಾಡಲಾಯಿತು.