ಭಾರತೀನಗರ: ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠಗೊಳಿಸಲು ಮತ್ತು ಮದ್ದೂರು ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ 15ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ತೆರಳಿ ಸ್ಪರ್ಧೆಗೆ ಆಹ್ವಾನಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮದ್ದೂರು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಘೋಷಣೆ ಆಗಿದ್ದು, ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮದ್ದೂರಿನಲ್ಲಿ ಕಾಂಗ್ರೆಸ್ 2008ರಿಂದಲೂ ಸೋಲುತ್ತಿದೆ. ಈ ಬಾರಿ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್‌ನಿಂದ ಗುರುಚರಣ್, ಬಿಜೆಪಿಯಿಂದ ಎಸ್.ಪಿ.ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕದಲೂರು ಸ್ಪರ್ಧಿಸುವ ಸಾಧ್ಯತೆಯಿದೆ.
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ವಾತಾವರಣ ಸೃಷ್ಟಿ ಆಗುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಗುರುಚರಣ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.
ನಾನು ಈವರೆಗೂ ತಟಸ್ಥವಾಗಿದ್ದೇನೆ. ಎಲ್ಲರೂ ಚುನಾವ ಣೆಗೆ ನಿಲ್ಲುವಂತೆ ಕೇಳುತ್ತಿ¨ªಾರೆ. ಈ ಬಗ್ಗೆ ಮುಂದಿನ ದಿನ ಗಳಲ್ಲಿ ತೀರ್ಮಾನಿಸುತ್ತೇನೆ. ಅಭಿಷೇಕ್ ಚುನಾವಣೆಗೆ ಸ್ಪರ್ಧಿ
ಸುವುದು ಆತನಿಗೆ ಬಿಟ್ಟಿದ್ದು.
-ಸುಮಲತಾ ಅಂಬರೀಶ್, ಸಂಸದೆ
ನಾವು ಜನರ ಸೇವೆ ಮಾಡಲು ಬಂದಿದ್ದೇವೆ. ರಾಜಕಾರಣದಿಂದಲೇ ಜನರ ಸೇವೆ ಮಾಡಬೇಕಾ? ಅಭಿಮಾನಿಗಳಿಂತ ಹೆಚ್ಚು ಶಕ್ತಿ ಯಾವುದೂ ಇಲ್ಲ. ಜನರು ಅವಕಾಶ ಕೊಟ್ಟರೆ ಜನಸೇವೆ ಮಾಡುತ್ತೇವೆ.
– ಅಭಿಷೇಕ್, ಅಂಬರೀಶ್ ಪುತ್ರ