ಬೆಂಗಳೂರು: ಅನರ್ಹಗೊಂಡಿರುವ ಶಾಸಕರ 17 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಲ್ಲ ಕ್ಷೇತ್ರಗಳ ವಸ್ತು ಸ್ಥಿತಿ ತಿಳಿಯಲು ವೀಕ್ಷಕರನ್ನು ನೇಮಕ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೂ ಪಕ್ಷದ ಹಿರಿಯ ನಾಯಕರ ನ್ನೊಳಗೊಂಡ ವೀಕ್ಷಕರನ್ನು ನೇಮಿಸಲಾಗಿದೆ.
ಅಥಣಿ-ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪುರ, ಲಕ್ಷ್ಮೀ ಹೆಬ್ಟಾಳ್ಕರ್, ಕಾಗವಾಡ-ಸತೀಶ್ ಜಾರಕಿಹೊಳಿ, ವೀರಕುಮಾರ್ ಪಾಟೀಲ್, ಎಚ್.ವೈ ಮೇಟಿ, ಗಣೇಶ್ ಹುಕ್ಕೇರಿ, ಗೋಕಾಕ್-ಶಿವಾನಂದ ಪಾಟೀಲ್, ಪಿ.ಎಂ. ಅಶೋಕ್, ಫಿರೋಜ್ ಸೇಠ್, ಮಹಾಂತೇಶ ಕೌಜಲಗಿ, ಮಸ್ಕಿ-ಈಶ್ವರ್ ಖಂಡ್ರೆ, ಎನ್.ಎಸ್.ಬೋಸರಾಜ್, ಅಮರೇಗೌಡ ಬಯ್ಯಾಪುರ, ಹಂಪನಗೌಡ ಬಾದರ್ಲಿ, ಕೆ. ವಿರುಪಾಕ್ಷಪ್ಪ, ಯಲ್ಲಾಪುರ-ಆರ್.ವಿ.ದೇಶಪಾಂಡೆ, ವಿನಯ್ ಕುಲಕರ್ಣಿ, ಗೋಟೆಕರ್, ಸತೀಶ್ ಸೈಲ್, ಹಿರೆಕೇ ರೂರು-ಎಚ್.ಕೆ. ಪಾಟೀಲ್, ಶ್ರೀನಿವಾಸ್ ಮಾನೆ, ರುದ್ರಪ್ಪಾ ಲಮಾಣಿ, ಮನೋಹರ್ ತಹಸೀಲ್ದಾರ್.
ರಾಣೆಬೆನ್ನೂರು-ಜಮೀರ್ ಅಹಮದ್ ಖಾನ್, ಬಸವರಾಜ್ ಶಿವಣ್ಣವರ್, ಟಿ.ಆರ್. ರಾಮಪ್ಪ, ವಿಜಯನಗರ(ಹೊಸಪೇಟೆ) ಬಸವರಾಜ ರಾಯರಡ್ಡಿ, ಕೆ.ಸಿ.ಕೊಂಡಯ್ಯ, ಇ. ತುಕಾರಾಂ, ಪಿ.ಟಿ. ಪರಮೇಶ್ವರ್ ನಾಯ್ಕ, ಚಿಕ್ಕಬಳ್ಳಾಪುರ-ಶಿವಶಂಕರ ರೆಡ್ಡಿ, ವಿ.ಮುನಿಯಪ್ಪ, ಸುಬ್ಟಾರೆಡ್ಡಿ, ಎನ್. ಸಂಪಂಗಿ.
ಕೆ.ಆರ್.ಪುರ-ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಬಿ. ಶಿವಣ್ಣ, ಎಂ. ನಾರಾಯಣಸ್ವಾಮಿ, ಯಶವಂತ ಪುರ-ಎಂ. ಕೃಷ್ಣಪ್ಪ, ಟಿ.ಬಿ.ಜಯಚಂದ್ರ, ಎಂ.ಸಿ. ವೇಣುಗೋಪಾಲ್, ಯು.ಬಿ.ವೆಂಕಟೇಶ್, ಗುರಪ್ಪ ನಾಯ್ಡು, ಆರ್.ಆರ್. ನಗರ-ಡಿ.ಕೆ.ಸುರೇಶ್, ಎಚ್.ಎಂ. ರೇವಣ್ಣ, ಸಿ.ಎಂ. ಲಿಂಗಪ್ಪ, ಪಿ.ಆರ್.ರಮೇಶ್.
ಹೊಸಕೋಟೆ-ಕೃಷ್ಣಬೈರೇಗೌಡ, ವಿ.ಆರ್.ಸುದರ್ಶನ್, ನಂಜೇಗೌಡ, ಎಸ್.ರವಿ, ಎಸ್.ಎನ್. ನಾರಾಯಣಸ್ವಾಮಿ, ಶಿವಾಜಿನಗರ-ಯು.ಟಿ. ಖಾದರ್, ಎನ್.ಎಚ್.ಹ್ಯಾರಿಸ್, ಕೆ.ಗೋವಿಂದರಾಜ್, ಆರ್.ವಿ.ದೇವರಾಜ್, ಮಹಾಲಕ್ಷ್ಮೀ ಲೇಔಟ್-ಡಾ.ಜಿ.ಪರಮೇಶ್ವರ್, ಬಿ.ಎಲ್.ಶಂಕರ್, ನಸೀರ್ ಅಹಮದ್, ಎಚ್.ಸಿ. ಬಾಲಕೃಷ್ಣ, ಕೆ.ಆರ್. ಪೇಟೆ- ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಹುಣಸೂರು-ಡಾ.ಎಚ್.ಸಿ. ಮಹದೇವಪ್ಪ, ತನ್ವೀರ್‌ಸೇಠ್, ಡಾ. ಯತೀಂದ್ರ, ಕೆ.ವೆಂಕಟೇಶ್, ಅನಿಲ್ ಚಿಕ್ಕಮಾದು ಅವರನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.