Advertisement
ಉತ್ತರ ಪ್ರದೇಶದ ಸಂಭಲ್ನಲ್ಲಿ ಶನಿ ವಾರ ಪ್ರಚಾರ ನಡೆಸಿದ ಅವರು, “ನಾಚಿಕೆ ಇಲ್ಲದ ಜನರು (ಕಾಂಗ್ರೆಸ್) ಗೋಮಾಂಸ ಸೇವಿಸುವ ಹಕ್ಕನ್ನು ನೀಡುವ ಬಗ್ಗೆ ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ನ ಈ ನಡೆಯನ್ನು ಭಾರತ ಯಾವತ್ತಾದರೂ ಸ್ವೀಕರಿಸಲು ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಯೋ ಧ್ಯೆಯ ಶ್ರೀರಾಮನ ದರ್ಶನಕ್ಕೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಇದೇ ಜನ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದರು ಎಂದೂ ಯೋಗಿ ಆರೋಪಿಸಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?
ದೇಶದ ಇತರ ನಾಗರಿಕರಂತೆ ಅಲ್ಪಸಂಖ್ಯಾಕರಿಗೂ ತಮ್ಮ ಆಯ್ಕೆಯ ಅನುಸಾರ ಉಡುಗೆ, ಆಹಾರ, ಭಾಷೆ ಮತ್ತು ವೈಯಕ್ತಿಕ ಕಾನೂನು ಪಾಲನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕಾಂಗ್ರೆಸ್ನ ಪ್ರಣಾಳಿಕೆಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾಕರ ವಿಭಾಗದಲ್ಲಿ ತಿಳಿಸಲಾಗಿದೆ.
Related Articles
Advertisement