ಬೆಳಗಾವಿ: ರಾಜ್ಯದಲ್ಲಿ ಮತ್ತೆ ಬಡವರ ಪರ ಸರ್ಕಾರ ಬರಬೇಕಾದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದು ಅ ಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಖಾನಾಪುರ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಖಾನಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಕೆಲಸ 24*7 ಇದ್ದಂತೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಎಲ್ಲರಿಗೂ ಚಿರಪರಿಚಿತ ಚನ್ನರಾಜ ಹಟ್ಟಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಭಾಗದ ಎಲ್ಲ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಯಾರಿಗೆ ಗೆಲ್ಲುವ ಶಕ್ತಿ, ಕೆಲಸ ಮಾಡುವ ಸಾಮರ್ಥ್ಯ ಇದೆ. ಅಂತಹ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಸ್ಥಳೀಯ ನಾಯಕರು ಸಭೆ ನಡೆಸಿ, ಒಮ್ಮತದಿಂದ ಚನ್ನರಾಜ ಹಟ್ಟಿಹೊಳಿ ಹೆಸರನ್ನು ಜಿಲ್ಲೆಯಿಂದ ಶಿಫಾರಸು ಮಾಡಲಾಗಿತ್ತು. ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ ಹತ್ತಿರದ ಬೆಳಗಾವಿಯಲ್ಲಿ ಇರಲಿದ್ದಾರೆ. ಚನ್ನರಾಜ ಇಲ್ಲಿಯೇ ಹುಟ್ಟಿ ಬೆಳೆದವರು. ಹೀಗಾಗಿ ನಿಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿ ಕೊಡಲಿದ್ದಾರೆ ಎಂದರು.
ಮೂರು ವರ್ಷಗಳಿಂದ ಈ ಭಾಗದ ಶಾಸಕಿ ಅಂಜಲಿ ನಿಂಬಾಳ್ಕರ್ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಸ್ತೆ, ಕೆರೆ ತುಂಬಿಸುವ ಕಾರ್ಯ, ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದೆ ಇದ್ದ ಶಾಸಕರು ಭಾಷೆಗೆ ಸೀಮಿತವಾಗಿದ್ದರು. ಆದರೆ ಈಗಿರುವ ಶಾಸಕಿ ನಿಂಬಾಳ್ಕರ ಇಡೀ ಖಾನಾಪುರ ಒಂದೇ ಎಂಬ ಭಾವನೆಯಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಚನ್ನರಾಜ್ ಅವರು ಸ್ಥಳೀಯ ಶಾಸಕರೊಂದಿಗೆ ಸೇರಿ ಸರ್ಕಾರದ ಯೋಜನೆಗಳನ್ನು ನಿಮಗೆ ತಲುಪಿಸಲಿದ್ದಾರೆ ಎಂದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸೋಣ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಬಲಪಡಿಸಿ, ಚನ್ನರಾಜ ಹಟ್ಟಿಹೊಳಿಯವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕು. ಸತೀಶ ಜಾರಕಿಹೊಳಿ ಇದ್ದ ಕಡೆ ಬೆಂಬಲಕ್ಕೆ ಕೊರತೆಯಿಲ್ಲ ಎನ್ನುವ ಮಾತಿದೆ. ರಾಜಕೀಯ ಲೆಕ್ಕಾಚಾರ, ಸಾಕಷ್ಟು ಅನುಭವ ಹೊಂದಿರುವ ಸತೀಶ ಅವರದ್ದು ಪಕ್ಷದ ಬಲವರ್ಧನೆಯಲ್ಲಿ ಪಾಲು ಹಿರಿದಾಗಿದೆ ಎಂದರು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅ ಧಿಕಾರಕ್ಕೆ ಬರಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚನ್ನರಾಜ ಅವರನ್ನು ಗೆಲ್ಲಿಸಬೇಕಾಗಿದೆ. ಪ್ರಥಮ ಪ್ರಾಶಸ್ತದ ಮತಗಳನ್ನು ಅವರಿಗೆ ನೀಡುವ ಮೂಲಕ ಆಯ್ಕೆ ಮಾಡೋಣ ಎಂದರು.
ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರ ದೇಶವ್ಯಾಪಿ ಮುಷ್ಕರ ವೇಳೆ ಸುಮಾರು 700ಕ್ಕೂ ಹೆಚ್ಚಿನ ರೈತರು ಸಾವ°ನ್ನಪ್ಪಿದ್ದಾರೆ. ಈ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಮಹದೇವ ಕೋಳೆಕರ, ಲಕ್ಷ್ಮಣ ಕೋಳೆಕರ, ಅನಿತಾ ದಂಡಗಲ, ಗೀತಾ ಅಂಬಡಗಟ್ಟಿ, ಯುವರಾಜ ಕದಂ, ಸುರೇಖಾ ಕಲಕರ್ಣಿ, ಕಾರ್ತಿಕ ಪಾಟೀಲ, ಮೃಣಾಲ್ ಹೆಬ್ಟಾಳಕರ, ಅಡಿವೇಶ ಇಟಗಿ ಇತರರು ಇದ್ದರು.