ಉಡುಪಿ: ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರವಾಗಿ 31ನೇ ಬೈಲೂರು ನಗರಸಭಾ ವಾರ್ಡಿನಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಇಂಧು ರಮಾನಂದ ಭಟ್ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರಿಗೆ ಸಹಕಾರಿಯಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ತಿಂಗಳಿಗೆ ರೂ. 2,000 ಬಹಳಷ್ಟು ಮಂದಿಗೆ ತಮ್ಮ ತಿಂಗಳ ಖರ್ಚು ನಿಭಾಯಿಸಲು ಸಹಕಾರಿಯಾಗಿದೆ. ಗೃಹಜ್ಯೋತಿ ಯೋಜನೆಯಿಂದ ಹೆಚ್ಚಿನ ಕುಟುಂಬಗಳಿಗೆ ಉಚಿತ ವಿದ್ಯುತ್ ಸರಬರಾಜು ಆಗುತ್ತಿದ್ದು, ತಮ್ಮ ತಿಂಗಳಿನ ಹಣವು ಉಳಿಯುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಕರ್ನಾಟಕದಾದ್ಯಂತ ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ಹಲವು ಧಾರ್ಮಿಕ ಕ್ಷೇತ್ರಗಳಿಗೆ, ತಮಗೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಸರ್ಕಾರವು ಸ್ವಾವಲಂಬಿ ಬದುಕು ಕಟ್ಟಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಅವರ ಪುತ್ರಿ ದಿವ್ಯಾ, ನಾಯಕರಾದ ಪ್ರಸಾದ್‌ರಾಜ್ ಕಾಂಚನ್, ಮಹಾಬಲ ಕುಂದರ್, ಹರೀಶ್ ಕಿಣಿ, ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್ ಪುತ್ತೂರು, ಅಮೃತ್ ಶೆಣೈ, ಸಂಧ್ಯಾ ತಿಲಕ್‌ರಾಜ್, ಸುರೇಶ್ ಶೆಟ್ಟಿ ಬನ್ನಂಜೆ, ನಾಸಿರ್, ಗಣೇಶ್ ನೆರ್ಗಿ, ಆನಂದ್ ಪೂಜಾರಿ, ಮ್ಯಾಕ್ಸಿಮ್ ಡಿ’ಸೋಜಾ, ಶಶಿರಾಜ್ ಕುಂದರ್, ಪ್ರದೀಪ್ ಶೇರಿಗಾರ್, ಮಿಥೇಶ್, ಕೃಷ್ಣ ಹೆಬ್ಬಾರ್, ಸತೀಶ್ ಕೊಡವೂರು, ಭರತ್ ಕುಮಾರ್, ಸತೀಶ್ ಕುಮಾರ್ ಮಂಚಿ, ಅನಂತ್ ಶೇಟ್, ರೊಸಾರಿಯೋ, ಶಾನವಜ್, ಅಬ್ಬೂ, ಪ್ರೀತಿ ಸಾಲಿನ್ಸ್, ರಾಘು, ಗೀತಾ ರವಿ, ರಮೇಶ್ ಪೂಜಾರಿ, ಆಕಾಶ್ ರಾವ್, ಜಯಶ್ರೀ ಶೇಟ್, ಅನಂತಕೃಷ್ಣ ಪ್ರಭು, ಲಿಖಿತ್, ಮಲ್ಲೇಶ್, ಕೃಷ್ಣಾನಂದ ಪೈ, ಕಾರ್ತಿಕ್ ಅಮೀನ್, ಅರ್ಚನಾ ದೇವಾಡಿಗ, ಸಂಜಯ್ ಆಚಾರ್ಯ ಹಾಗೂ ಇನ್ನಿತರ ಮುಖಂಡರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಭಾಗವಹಿಸಿ ಜಯಪ್ರಕಾಶ್ ಹೆಗ್ಡೆ ಪರವಾಗಿ ಮತಯಾಚನೆ ಮಾಡಿ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕೆಂದು 31ನೇ ಬೈಲೂರು ವಾರ್ಡಿನ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಲಾಯಿತು.