Advertisement

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರ ಸೈಕಲ್‌ ಜಾಥಾ

09:36 PM Jul 14, 2021 | Team Udayavani |

ದೇವರಹಿಪ್ಪರಗಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೇವರಹಿಪ್ಪರಗಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ಪಟ್ಟಣದ ಕರ್ನಾಟಕ ಬ್ಯಾಂಕ್‌ದಿಂದ ಡಾ| ಅಂಬೇಡ್ಕರ್‌ ವೃತ್ತದವರೆಗೆ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿತ್ತು.

Advertisement

ಸೈಕಲ್‌ ಏರಿದ ಎಲ್ಲ ಮುಖಂಡರು, ಯುವಕರು, ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಡಾ| ಅಂಬೇಡ್ಕರ್‌ ವೃತ್ತದಲ್ಲಿ ಸಭೆ ನಡೆಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ ಯಾಳಗಿ, ಬಿಜೆಪಿ ಭಂಡ ಸರ್ಕಾರವಾಗಿದ್ದು ಜನಸಮಾನ್ಯರ ಬೇಕು ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ದಿನನಿತ್ಯ ಬೆಲೆ ಏರಿಕೆ ಮಾಡುತ್ತ ಜನಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಿನನಿತ್ಯ ಪ್ರತಿಭಟನೆ ಮಾಡಿದರೂ ಕ್ಯಾರೆ ಎನ್ನದೆ ತನ್ನ ದುರಾಡಳಿತ ಮುಂದುವರಿಸಿದೆ. ಇದರಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.

ಈ ಸರ್ಕಾರ ಹೋಗುವವರೆಗೆ ರಾಜ್ಯದ ಜನರು ನೆಮ್ಮದಿಯಿಂದ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಶೀರಶೇಠ ಬೇಪಾರಿ, ಯುವ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಗುಡಿಮನಿ, ಯುವ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮುನೀರ ಬಿಜಾಪುರ, ಕಾಂಗ್ರೆಸ್‌ ಕಾರ್ಯದರ್ಶಿ ಗುರುರಾಜ ಆಕಳವಾಡಿ ಮಾತನಾಡಿದರು. ರಾಜಕುಮಾರ ಸಿಂದಗೇರಿ, ಶಬ್ಬಿರ ಮುಲ್ಲಾ, ರಾಮಣ್ಣ ನಾಯೊRàಡಿ, ರಮೇಶ ದಳವಾಯಿ, ಮಡಿವಾಳಪ್ಪ ಬ್ಯಾಲ್ಯಾಳ, ರಾವುತ್‌ ಮಾಸ್ತರ ತಳಕೇರಿ, ರಾಘವೇಂದ್ರ ಪಡಗಾನೂರ,ರಾವುತ್‌ ಎಸ್‌.ಟಿ. ಪ್ರಕಾಶ ಅವರಾದಿ, ಪ್ರಭು ಖಾನಾಪುರ,ಯಮನಪ್ಪ ಬೂತಾಳಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next