Advertisement
ಪ್ರಭಾಸ್ ನಟಿಸಿರುವ “ಆದಿಪುರುಷ್ ” ಚಿತ್ರ ಕಳಪೆ ವಿಎಫ್‌ಎಕ್ಸ್ ಮತ್ತು ಆಡುಮಾತಿನ ಸಂಭಾಷಣೆಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಟೀಕೆ ಮಾಡಲಾಗಿದೆ. ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರು ‘ಲಂಕಾ ದಹನ್’ ಸರಣಿಯಲ್ಲಿ ಹನುಮಂತನ ಸಂಭಾಷಣೆಗಾಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
Related Articles
Advertisement
ರಾಯ್‌ಪುರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಈ ಸಿನಿಮಾವು ರಾಮ ಮತ್ತು ಹನುಮಂತನ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನವಾಗಿದೆ. ಜನರು ಈ ದಿಕ್ಕಿನಲ್ಲಿ ನಿಷೇಧದ ಬೇಡಿಕೆಯನ್ನು ಎತ್ತಿದರೆ ಸರ್ಕಾರ ಅದರ ಬಗ್ಗೆ ಯೋಚಿಸುತ್ತದೆ ಎಂದು ಹೇಳಿದ್ದಾರೆ.
ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿ, ಬರಹಗಾರ ಮುಂತಶಿರ್ ಮತ್ತು ಚಿತ್ರದ ನಿರ್ದೇಶಕ ರಾವುತ್ ಅವರು “ಚಿತ್ರಕ್ಕಾಗಿ, ವಿಶೇಷವಾಗಿ ಹನುಮಾನ್ ದೇವರಿಗಾಗಿ ಬರೆದ ದಾರಿಹೋಕ ಸಂಭಾಷಣೆಗಳಿಗಾಗಿ” ದೇಶದ ಕ್ಷಮೆಯಾಚಿಸಬೇಕು ಎಂದು ಕಿಡಿ ಕಾರಿದ್ದಾರೆ.
ಎಎಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್, ಈ ಚಿತ್ರವು ರಾಮ, ಸೀತೆ, ಹನುಮಾನ್ ಮತ್ತು ಹಿಂದೂ ಸಮಾಜಕ್ಕೆ “ಘೋರ ಅವಮಾನ”,ಈ ಚಿತ್ರ ಮಾಡಲು ಬಿಜೆಪಿ ಅನುಮತಿ ನೀಡಿದೆ. ಇಂತಹ ಚಿತ್ರ ನಿರ್ಮಾಣ ಮತ್ತು ಪ್ರದರ್ಶನಕ್ಕೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ನಟಿಸಿರುವ 3D ಬಹುಭಾಷಾ ಚಿತ್ರ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿದೆ.