Advertisement
ಈಗಾಗಲೇ ನಿಗಮ- ಮಂಡಳಿ ಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಸಿದ್ಧಗೊಂಡಿದೆ. ಮೊದಲ ಹಂತದಲ್ಲಿ ಶಾಸಕರು ಮತ್ತು ಕಾರ್ಯಕರ್ತರಿಗೆ ಮಾತ್ರ ಈ “ಅಧಿಕಾರ ಭಾಗ್ಯ’ ಸಿಗಲಿದ್ದು, ವಿಧಾನಪರಿಷತ್ತಿನ ಸದಸ್ಯರಿಗೆ ಅಧಿಕಾರ ಸಿಗುವುದು ಬಹುತೇಕ ಅನುಮಾನ. ಅಂತಿಮ ಪಟ್ಟಿ ಒಂದೆರಡು ದಿನಗಳಲ್ಲಿ ಪ್ರಕಟ ಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧವಾಗಿಯೇ ರಣದೀಪ್‌ಸಿಂಗ್ ಸುಜೇìವಾಲ ಮಂಗಳವಾರ ಖಾಸಗಿ ಹೊಟೇಲ್‌ನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯೊಂದಿಗೆ ಸುದೀರ್ಘ ಸಭೆ ನಡೆಸಿದರು. ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನೇಮಕಾತಿ ಮಾಡೋಣ, ಅನಂತರದ ದಿನಗಳಲ್ಲಿ ಕಾರ್ಯಕರ್ತರು, ಪಕ್ಷದ ಮುಖಂಡರಿಗೆ ಅವಕಾಶ ಕೊಡೋಣ ಎಂದು ಸಿಎಂ ಪ್ರತಿಪಾದಿಸಿದ್ದಾರೆ.
Related Articles
Advertisement
ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಕಲ್ಪಿಸುವ ವಿಷಯದಲ್ಲಿ ಸಿಎಂ, ಡಿಸಿಎಂ ನಡುವೆ ಒಮ್ಮತ ಮೂಡದೆ ಇದ್ದರೆ ಈ ವಿಷಯ ಮತ್ತೊಮ್ಮೆ ದಿಲ್ಲಿಗೆ ಸ್ಥಳಾಂತರ ಆಗುವ ಸಾಧ್ಯತೆಗಳಿವೆ. ಈ ಮಧ್ಯೆ ಸುಜೇìವಾಲ ಸಿಎಂ ಜತೆಗಿನ ಸಭೆ ಬಳಿಕ ಡಿಸಿಎಂ ಶಿವಕುಮಾರ್ ಪ್ರತ್ಯೇಕವಾಗಿ ಸುರ್ಜೇವಾಲ ಅವರೊಂದಿಗೆ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.
ಶೀಘ್ರ ನೇಮಕಕ್ಕೆ ಹೆಚ್ಚಿದ ಒತ್ತಡಮತ್ತೊಂದೆಡೆ ಸುರ್ಜೇವಾಲ ಆಗಮನದ ಬೆನ್ನಲ್ಲೇ ಆಕಾಂಕ್ಷಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಆದಷ್ಟು ಬೇಗ ಪಟ್ಟಿ ಬಿಡುಗಡೆಗೆ ಒತ್ತಡ ಹಾಕುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ನವೆಂಬರ್ ಅಂತ್ಯದಲ್ಲೇ ಪಟ್ಟಿ ಪ್ರಕಟಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಒಂದೂವರೆ ತಿಂಗಳಾದರೂ ಆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ತಮ್ಮ ನಾಯಕರ ಮುಂದೆ ಬೇಸರವನ್ನೂ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕೆಲವು ಶಾಸಕರು ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ. ಈಗ ಇದನ್ನು ಸ್ವೀಕರಿಸಿದರೆ ಮುಂದಿನ ದಿನಗಳಲ್ಲಿ ಆಗಬಹುದಾದ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈತಪ್ಪುತ್ತದೆ ಎಂದು ಅಪಸ್ವರ ಎತ್ತಿದ್ದು, ಅಂತಹವರನ್ನೂ ಕರೆದು ಮನವೊಲಿಸುವ ಕೆಲಸ ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬುಧವಾರ ಹಾಗೂ ಗುರುವಾರ ಮ್ಯಾರಥಾನ್ ಸಭೆಗಳು ಏರ್ಪಾಡಾಗಿವೆ. ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್‌ಗೆ ಪ್ರಮುಖ ಆದ್ಯತೆಯಾಗಿದೆ. ಈ ಎಲ್ಲ ಗೊಂದಲಗಳ ನಡುವೆ ಪಟ್ಟಿ ಪ್ರಕಟಗೊಳ್ಳುವುದು ಅನುಮಾನ ಎಂದೂ ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಖರ್ಗೆ ಭೇಟಿಯ ಗುಟ್ಟೇನು?
ಸೋಮವಾರ ತಡರಾತ್ರಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಡಿಸಿಎಂ ಹುದ್ದೆಗಳ ಸೃಷ್ಟಿಗೆ ಐದಾರು ಸಚಿವರಿಂದ ಪದೇಪದೆ ಒತ್ತಡ, ನಿಗಮ ಮಂಡಳಿಗಳ ನೇಮಕಾತಿ ವಿಷಯ ಕುರಿತು ಚರ್ಚಿಸಿದರೆಂದು ಹೇಳಲಾಗುತ್ತಿದೆ. ಖರ್ಗೆ ಸುರ್ಜೇವಾಲ ನಡುವಿನ ಮಾತುಕತೆಯ ಪರಿಣಾಮ ಅನ್ನುವಂತೆ ಖರ್ಗೆಯವರು ಡಿಸಿಎಂ ಹುದ್ದೆ ಸೃಷ್ಟಿಯ ಪ್ರಸ್ತಾವನೆಯೇ ಹೈಕಮಾಂಡ್ ಮುಂದೆ ಇಲ್ಲವೆಂದು ಸಾರಾಸಗಟು ತಿರಸ್ಕರಿಸಿದ್ದಾರೆ. ನೇಮಕಾತಿಯ
ಲೆಕ್ಕಾಚಾರಗಳು
1.ರಣದೀಪ್ ಸುರ್ಜೇವಾಲ ರಾಜ್ಯಕ್ಕೆ ಆಗಮನದ ಬೆನ್ನಲ್ಲೇ ನಿಗಮ-ಮಂಡಳಿ ಆಯ್ಕೆ ಚರ್ಚೆಗೆ ಜೀವ.
2.ಮೊದಲ ಹಂತದಲ್ಲಿ ಶಾಸಕರು, ಕಾರ್ಯಕರ್ತ ರಿಗೆ ಮಾತ್ರ ಸ್ಥಾನ, ಪರಿಷತ್ ಸದಸ್ಯರಿಗೆ ಅವಕಾಶವಿಲ್ಲ?
3.3- 4 ಬಾರಿ ಶಾಸಕರಾದ ವರಿಗೆ ಪಟ್ಟಿಯಲ್ಲಿ ಮೊದಲ ಆದ್ಯತೆ, 2 ಬಾರಿ ಆದವರಿಗೆ 2ನೇ ಆದ್ಯತೆ!
4.ಮೊದಲ ಹಂತದಲ್ಲೇ ಕಾರ್ಯಕರ್ತರಿಗೆ ಸ್ಥಾನ ಬೇಡ ಎಂದ ಸಿಎಂ? ಕೊಡುವುದೇ ಸೂಕ್ತ
ಎಂದ ಡಿಕೆಶಿ?