Advertisement
ಎರಡು ಕಂತುಗಳಲ್ಲಿ 166 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರೂ ಇನ್ನೂ 58 ಕ್ಷೇತ್ರಗಳು ಬಾಕಿ ಉಳಿದಿವೆ. ಇವುಗಳ ಬಗ್ಗೆ ಅಂತಿಮ ತೀರ್ಮಾನಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಮೇರೆಗೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದರು. ಅನಂತರ ಕೇಂದ್ರ ಚುನಾವಣ ಸಮಿತಿ ಸಭೆ ನಡೆದರೂ ಪಟ್ಟಿ ಬಿಡುಗಡೆ ನಿರೀಕ್ಷೆ ಹುಸಿಯಾಗಿದೆ.
ಈಗಾಗಲೇ ಬಾಕಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ವಿಳಂಬ ಆಗುತ್ತಿರುವುದಕ್ಕೆ ಟಿಕೆಟ್ ಆಕಾಂಕ್ಷಿಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದರಿಂದ ಮತ್ತಷ್ಟು ವಿಳಂಬ ಮಾಡಬಾರದು ಎಂಬುದು ರಾಜ್ಯ ಮಟ್ಟದ ನಾಯಕರ ಅಪೇಕ್ಷೆ. ಇದರ ಹೊರತಾಗಿಯೂ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ವಿಳಂಬ ಆಗುತ್ತಿದೆ ಎನ್ನಲಾಗಿದೆ. ಈ ಇಬ್ಬರು ನಾಯಕರನ್ನು ಹೊರಗಿಟ್ಟು ಖರ್ಗೆ ಸೇರಿದಂತೆ ಹೊಸದಿಲ್ಲಿಯಲ್ಲಿರುವ ನಾಯಕರು ಶನಿವಾರ ಹಾಗೂ ರವಿವಾರ ಸರಣಿ ಸಭೆಗಳನ್ನು ನಡೆಸಿ ಸಂಭವನೀಯ ಅಭ್ಯರ್ಥಿಗಳ ಮತ್ತೂಂದು ಪಟ್ಟಿ ತಯಾರಿಸಿದ್ದರು. ಅ ಪಟ್ಟಿ ಸಂಬಂಧ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಮುಂದುವರಿದ ಗೊಂದಲ
ಪುಲಕೇಶಿನಗರ, ಶಿಡ್ಲಘಟ್ಟ, ಲಿಂಗಸುಗೂರು, ಕುಂದಗೋಳ ಹಾಗೂ ಹರಿಹರದ ಹಾಲಿ ಶಾಸಕರ ಟಿಕೆಟ್ ಹಂಚಿಕೆ ವಿಷಯವೇ ಕಗ್ಗಂಟಾಗಿದೆ. ಈ 5 ಕ್ಷೇತ್ರಗಳ ಟಿಕೆಟ್ ವಿಷಯದಲ್ಲಿ ನಾಯಕರ ನಡುವೆ ಒಮ್ಮತ ಮೂಡುತ್ತಿಲ್ಲ. ಒಬ್ಬೊಬ್ಬರು ಒಬ್ಬೊಬ್ಬರ ಪರವಾಗಿ ವಕಾಲತ್ತು ಹಾಕುತ್ತಿರುವುದೇ ಅಂತಿಮ ತೀರ್ಮಾನಕ್ಕೆ ವಿಳಂಬ ಆಗುತ್ತಿದೆ. ಜತೆಗೆ ಇತ್ತೀಚೆಗೆ ಪಕ್ಷಕ್ಕೆ ವಲಸೆ ಬಂದಿರುವ ಮೋಹನ ಲಿಂಬಿಕಾಯಿ ಅವರಿಗೆ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕೋ-ಬೇಡವೋ ಎಂಬುದರ ಬಗ್ಗೆಯೂ ಗೊಂದಲ ಉಂಟಾಗಿದೆ. ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡುವುದಕ್ಕೆ ಕ್ಷೇತ್ರದ ಐದಾರು ಮಂದಿ ಆಕಾಂಕ್ಷಿಗಳು ಒಗ್ಗಟ್ಟಾಗಿ ವಿರೋ ಧಿ ಸು ತ್ತಿ ರು ವುದು ತಲೆ ನೋವಾಗಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಅಸಮಾಧಾನ ಉಂಟಾಗುವುದು ನಿಶ್ಚಿತ ಎಂಬುದು ಗ್ಯಾರಂಟಿಯಾಗಿದೆ. ಹೀಗಾಗಿ ಮುಂದೇನು ಎಂಬ ಪ್ರಶ್ನೆ ಮೂಡಿದೆ.
Related Articles
Advertisement