Advertisement

ಕೈ 2ನೇ ಪಟ್ಟಿ ಬಿಡುಗಡೆ

12:30 AM Mar 14, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ 21 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್‌ ಬುಧವಾರ ಪ್ರಕಟಿಸಿದೆ. 

Advertisement

ಮಹಾರಾಷ್ಟ್ರದ 5 ಹಾಗೂ ಉತ್ತರ ಪ್ರದೇಶದ 16 ಕ್ಷೇತ್ರಗಳಿಗೆ ಉಮೇದುವಾರರನ್ನು ಘೋಷಿಸಲಾಗಿದೆ. ಮೊರಾದಾಬಾದ್‌ನಿಂದ ರಾಜ್‌ ಬಬ್ಬರ್‌, ಕಾನ್‌ಪುರದಿಂದ ಶ್ರೀ ಪ್ರಕಾಶ್‌ ಜೈಸ್ವಾಲ್‌, ಬಹ್ರೈಚ್‌ನಿಂದ ಸಾವಿತ್ರಿ ಫ‌ುಲೆ ಹಾಗೂ ಸುಲ್ತಾನ್‌ಪುರದಿಂದ ಸಂಜಯ್‌ ಸಿಂಗ್‌ ಕಣಕ್ಕಿಳಿಯಲಿದ್ದಾರೆ. ಇನ್ನು ಮುಂಬಯಿ ಉತ್ತರ ಕೇಂದ್ರ ಕ್ಷೇತ್ರದಿಂದ ಪ್ರಿಯಾ ದತ್‌, ಮುಂಬಯಿ ದಕ್ಷಿಣದಿಂದ ಮಿಲಿಂದ್‌ ದಿಯೋರಾ, ಸೋಲಾಪುರದಂದ ಸುಶೀಲ್‌ ಕುಮಾರ್‌ ಶಿಂಧೆ ಸ್ಪರ್ಧಿಸಲಿದ್ದಾರೆ. ಕೆಲವೇ ದಿನಗಳ ಹಿಂದೆ ಕಾಂಗ್ರೆಸ್‌ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next