Advertisement

ಸೇನಾಅಧಿಕಾರಿಗೆ ಅಭಿನಂದನೆ

02:14 PM Jan 16, 2021 | Team Udayavani |

ಮಾಗಡಿ: ಭಾರತೀಯ ಯೋಧರ ಶೌರ್ಯ, ಸಾಹಸ ಮೇರುಪರ್ವತವಿದ್ದಂತೆ, ತಾಯ್ನಾಡಿನ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡುತ್ತಾರೆ ಎಂದು ಕೃಷಿಕ ಸಮಾಜದ ದೆಹಲಿ ಪ್ರತಿನಿಧಿ ಬೆಳಗವಾಡಿ ಸತೀಶ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸೇನಾದಿನದ ಅಂಗವಾಗಿ ಬೆಂಗಳೂರಿನ ಕೇಂದ್ರೀಯ ಸೇನಾ ಕಚೇರಿಯಲ್ಲಿ ಸೇನಾ ನೌಕೆಯ ಅಧಿಕಾರಿ ಡಾರ್ಜಲಿಂಗ್‌ ಅವರಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದ್ದಾಗಿ ತಿಳಿಸಿದ ಅವರು, ಮಳೆ, ಗಾಳಿ, ಚಳಿ ಬಿಸಿಲು ಎನ್ನದೆ ತಾಯ್ನಾಡಿನ ಜನರ ರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.ಭಾರತೀಯ ಸೇನೆ, ಕಮಾಂಡರ್‌ಗಳು, ಸೇನಾನೌಕೆ, ವಾಯುದಳ ಇವರುಗಳು ಅಟಲ್‌ ಬಿಹಾರಿ ವಾಜಿಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ಪಾಕಿಸ್ತಾನವನ್ನು ಸೆದೆಬಡಿದ ವೀರಯೋಧರ ಕರ್ತವ್ಯ ಅವಿಸ್ಮರಣೀಯವಾದುದು.

ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

ಇಂಥ ಯೋಧರನ್ನು ಪಡೆದ ನಾವೇ ಧನ್ಯರು. ಕೊಡಗಿನ ಕುವರ ಫೀಲ್ಡ್‌ ಮಾರ್ಷಿಲ್‌ ಕೆ.ಎಂ.ಕಾರ್ಯಪ್ಪ, ಮಹಾನ್‌ ದಂಡ ನಾಯಕ ಗರಡಿಯಲ್ಲಿ ತಯಾರದ ಕಮಾಂಡಗಳು, ನೌಕಪಡೆ, ವಾಯುಪಡೆ ಅರೆಸೇನಾಪಡೆ ಇವರೆಲ್ಲರೂ ದೇಶದ ಒಂದೊಂದು ವಜ್ರದ ಕವಚಗಳಿದ್ದಂತೆ. ಇವರಿಗೊಂದು ಸಲಾಮ್‌ ಎಂದು ಅಭಿನಂದಿಸಿದ್ದಾಗಿ ಸತೀಶ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next