Advertisement

ಸವ್ಯಸಾಚಿ ಯಕ್ಷಗಾನ ಗುರು ಪದಕಣ್ಣಾಯರಿಗೆ ಅಭಿನಂದನೆ

01:00 AM Mar 14, 2019 | Harsha Rao |

ಕಾಸರಗೋಡು: ಬಂದಡ್ಕ ಸಮೀಪದ ಪಾಲಾರಿನ “ಇಂಚರ’ದಲ್ಲಿ ಕಬೆಕ್ಕೋಡಿನ ಕೃಷ್ಣ ಪ್ರಸಾದ-ವಂದನಾ ದಂಪತಿ ಪುತ್ರ ಅಂಕಿತ್‌ನ ಉಪನಯನ ಸಮಾರಂಭದಲ್ಲಿ ಬಾಯಾರಿನ ಸೂರ್ಯ ನಾರಾಯಣ ಪದಕಣ್ಣಾಯ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು.

Advertisement

ಫಾರ್ಮಾ ಸಯನ್ಸ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದರೂ ಕಳೆದ 25 ವರ್ಷಗಳಿಂದ ತಮ್ಮನ್ನು ಯಕ್ಷಗಾನ ಕ್ಷೇತ್ರಕ್ಕೆ ಸಮರ್ಪಿಸಿಕೊಂಡ ಅವರು ಯಕ್ಷಗಾನ ರಂಗಕ್ಕೆ ಈಗಾಗಲೇ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮರ್ಪಿಸಿದ್ದಾರೆ. ಪ್ರಸ್ತುತ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಯಕ್ಷಗಾನ ಗುರುಗಳೂ ಆಗಿರುವ ಅವರು ಅರಿಯಪ್ಪಾಡಿ, ಅಡೂರು, ಕುಂಟಾರು ಮೊದಲಾದ ಸ್ಥಳಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದಾರೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳಲ್ಲಿ ಪ್ರಬುದ್ಧರಾಗಿರುವ ಅವರು ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆಯುತ್ತಿದ್ದಾರೆ. ಶ್ರೀಶ ಕುಮಾರ ಪಂಜಿತ್ತಡ್ಕ ಸಮ್ಮಾನಪತ್ರ ವಾಚಿಸಿದರು. ಕೃಷ್ಣ ಪ್ರಸಾದ ದಂಪತಿಗಳು, ವಿದ್ಯಾ ಕುಂಟಿಕಾನಮಠ ಗುರುಗಳನ್ನು ಸಮ್ಮಾನಿಸಿದರು. ವಸುಧಾ ಕೇವಳ, ಶ್ರೀಹರಿ ಮವ್ವಾರು, ಸುಪ್ರೀತಾ, ಅಭಿಜ್ಞಾ, ಆಕಾಶ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next