Advertisement

ಕೋವಿಡ್‌ 19 ವಾರಿಯರ‍್ಸ್‌ಗೆ ಅಭಿನಂದನೆ

05:53 AM Jun 02, 2020 | Lakshmi GovindaRaj |

ಯಳಂದೂರು: ರಾಜ್ಯದಲ್ಲಿ ಕೋವಿಡ್‌ 19 ಮುಕ್ತ ಏಕೈಕ ಹಸಿರು ಜಿಲ್ಲೆಯಾಗಿರುವ ಚಾಮರಾಜನಗರದ ಸುತ್ತಮುತ್ತಲ ದೇವರ ರೂಪದಲ್ಲಿ ಜಿಲ್ಲೆಯ ಆರೋಗ್ಯ ಕಾರ್ಯಕರ್ತರು ಶ್ರಮಿಸಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು  ಶಾಸಕ ಮಹೇಶ್‌ ತಿಳಿಸಿದರು. ಪಟ್ಟಣದ ಪೊಲೀಸ್‌ ಠಾಣೆ ಮುಂದೆ ತಮ್ಮ 65ನೇ ಹುಟ್ಟು ಹಬ್ಬದ ಪ್ರಯುಕ್ತ ಕೋವಿಡ್‌ 19 ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

Advertisement

ಮಲೆ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ, ಹಿಮವದ್‌  ಗೋಪಾಲಸ್ವಾಮಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ದಂಡಿನಮಾರಮ್ಮ ದೇವತೆಗಳ ರೂಪದಲ್ಲಿ ಜಿಲ್ಲೆಯನ್ನು ಆರೋಗ್ಯ ಕಾರ್ಯ  ಕರ್ತರು ಕಾಪಾಡಿದ್ದಾರೆ. ಜಿಲ್ಲೆಯ 12 ಲಕ್ಷಕ್ಕೂ ಅಧಿಕ ಜನರನ್ನು ರಕ್ಷಿಸಿದ ಆರೋಗ್ಯ ಇಲಾಖೆ, ಆಶಾ, ನಗರ,  ಪಟ್ಟಣ ಗ್ರಾಪಂ, ಪೊಲೀಸ್‌, ಪೌರಕಾರ್ಮಿಕ ಸೇವೆ ಅನನ್ಯ ಎಂದರು.

ಮುನ್ನೆಚ್ಚರಿಕೆ ಅಗತ್ಯ: ಇಂದಿನಿಂದ ಲಾಕ್‌ಡೌನ್‌ ಸಡಿಲವಾಗಿದೆ. ಈಗ ಕೋವಿಡ್‌ 19 ವಾರಿಯರ್ಸ್‌ ಬದಲು ನಮ್ಮನ್ನು ನಾವೇ ರಕ್ಷಿಸಿಕೊಳ್ಳುವ ಅಗತ್ಯವಿದೆ.  ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ವೈಯಕ್ತಿಕ ಅಂತರ ಕಾಯ್ದುಕೊಂಡರೆ ನಮ್ಮ ಜಿಲ್ಲೆ ಹಸಿರು ವಲಯದಲ್ಲಿರುತ್ತದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಉಪ ತಹಶೀಲ್ದಾರ್‌  ನಂಜಯ್ಯ ಪಪಂ ಮುಖ್ಯಾಧಿಕಾರಿ ನಾಗರತ್ನ ಆರೋಗ್ಯಾಧಿಕಾರಿ ಮಹೇಶ್‌ಕುಮಾರ್‌ ಟಿಎಚ್‌ಒ ಡಾ.ಮಂಜುನಾಥ್‌, ವೈದ್ಯಾಧಿಕಾರಿ ಡಾ. ಶ್ರೀಧರ್‌, ಸಿಡಿಪಿಒ ಸೋಮಶೇಖರ್‌, ಸಿಪಿಐ ಶೇಖರ್‌, ಪಿಎಸ್‌ಐ ರವಿಕುಮಾರ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next