Advertisement

ಶತಾಯುಷಿ ಹಿರೇಬೆಟ್ಟು ವಿಟ್ಠಲ ನಾಯಕ್‌ಗೆ ಅಭಿನಂದನೆ

10:45 AM Oct 25, 2017 | Team Udayavani |

ನವಿ ಮುಂಬಯಿ: ರಾಜಾಪುರ ಸಾರಸ್ವತ ಸಂಘ ಮುಂಬಯಿ ವತಿಯಿಂದ ಸಮಾಜ ಸೇವಕ ಶತಾಯುಷಿ ಹಿರೇಬೆಟ್ಟು ವಿಟ್ಠಲ ಕೃಷ್ಣ ನಾಯಕ್‌ ಅವರಿಗೆ ವಿಶೇಷ ಅಭಿನಂದನ  ಕಾರ್ಯಕ್ರಮವು ಇತ್ತೀಚೆಗೆ ಸೀವುಡ್ಸ್‌ನಲ್ಲಿ ನಡೆಯಿತು.

Advertisement

ಸದಾನಂದ ಪಾಟ್ಕರ್‌ ಪನ್ವೇಲ್‌, ಆರ್‌. ಕೆ. ನಾಯಕ್‌, ರಾಜಾಪುರ ಸಾರಸ್ವತ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್‌ ಅವರು, ನಾಯಕ್‌ ಅವರನ್ನು ಶಾಲು ಹೊದೆಸಿ, ತಿಲಕವನ್ನಿಟ್ಟು, ಮಲ್ಲಿಗೆ ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ವಿಶೇಷ ರೀತಿಯಲ್ಲಿ ಸಮ್ಮಾನಿಸಿ ಅಭಿನಂದಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ  ರಾಜಾಪುರ ಸಾರಸ್ವತ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್‌ ಅವರು, ಇಲ್ಲಿಯವರೆಗೆ ಶತಾಯುಷಿ ಎಂಬುದು ಅಲ್ಲಿ ಇಲ್ಲಿ ಕೇಳಿದ ವಿಷಯವಾಗಿತ್ತು. ಆದರೆ ಇಂದು ಪ್ರತ್ಯಕ್ಷವಾಗಿ ನಮ್ಮವರೊಬ್ಬರು 100 ವರ್ಷಗಳನ್ನು ಪೂರೈಸಿರುವುದು ಸಂತೋಷದ ಸಂಗತಿಯಾಗಿದೆ. ಶತಾಯುಷಿ ಸಾಧಕರೊಬ್ಬರನ್ನು ಸಮ್ಮಾನಿಸುವ ಸೌಭಾಗ್ಯ ನನಗೆ ಒದಗಿ ಬಂದಿರುವುದು ನನ್ನ ಭಾಗ್ಯವಾಗಿದೆ ಎಂದು ನುಡಿದು ಅಭಿನಂದಿಸಿ ಶುಭ ಹಾರೈಸಿದರು.

ಅತಿಥಿಯಾಗಿದ್ದ ರಾಮಣ್ಣ ಶೆವಡೆ ಅವರು ಮಾತನಾಡಿ, ಇಂದಿನ ಕಾರ್ಯಕ್ರಮವು ನಾನು ಜೀವಮಾನದಲ್ಲೇ ನೋಡಿರದ ಅಪೂರ್ವ ಅನುಭವ, ಕ್ಷಣವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದೆ ಒಂದು ರೀತಿಯ ಸೌಭಾಗ್ಯವಾಗಿದೆ ಎಂದು ನುಡಿದು ಅಭಿನಂದಿಸಿದರು.

ಅತಿಥಿಯಾಗಿ ಪಾಲ್ಗೊಂಡ ಡಹಾಣೂವಿನ ಪಿ. ಆರ್‌. ರವಿಶಂಕರ್‌ ಮಾತನಾಡಿ, ಶತ
ಮಾನದ ಹಿಂದಿನ ವೃಕ್ಷದ ಬೇರುಗಳಿಗೆ ನೀರುಣ್ಣಿಸಿ ಗೌರವಿಸುವ ರೀತಿ ಒಂದು
ರೀತಿಯ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ನಮ್ಮ ಹಿರಿಯರಿಗೆಲ್ಲಾ ಸಂದ ಗೌರವವಾಗಿದೆ. ಇಂತಹ ಅರ್ಥ ಪೂರ್ಣ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಪಾಲ್ಗೊಳ್ಳುವಂತೆ ಮಾಡಿದಾಗ ಹಿರಿಯರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಅವರಿಗೆ ಅರಿವಾಗುತ್ತದೆ ಎಂದರು.

Advertisement

ಸಂಸ್ಥೆಯ ಕಾರ್ಯದರ್ಶಿ ಪೂಜಾ ಜೆ. ಕಾಮತ್‌ ಅವರು ಸಮ್ಮಾನಿತ ನಾಯಕ್‌ ಅವರನ್ನು ಪರಿಚಯಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಾಂತಾ ಎಸ್‌. ನಾಯಕ್‌, ಲತಾ ಗೋಪಾಲ ನಾಯಕ್‌, ಸುನೀಲ್‌ ಚಿಂಬಾಳ್ಕರ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಸದಾನಂದ ವಿ. ನಾಯಕ್‌ ಅವರು ವಂದಿಸಿದರು. ವಿಟuಲ ಕೃಷ್ಣ ನಾಯಕ್‌ ಅವರನ್ನು ಮಹಿಳಾ ವಿಭಾಗದ ಸದಸ್ಯೆಯರು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರೇಬೆಟ್ಟು ವಿಟ್ಠಲ ಕೃಷ್ಣ ನಾಯಕ್‌ ಅವರು, ನಿಮ್ಮೆಲ್ಲರ ಅಭಿಮಾನ, ಗೌರವಕ್ಕೆ ಋಣಿಯಾಗಿದ್ದೇನೆ. ಇಂದಿನ ದಿನವು ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಕ್ಷಣವಾಗಿದೆ. ನಿಮ್ಮೆಲ್ಲರ ಗೌರವ, ಅಭಿಮಾನ, ಪ್ರೀತಿ ಇದೇ ರೀತಿಯಲ್ಲಿರಲಿ ಎಂದು ಆಶಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next