Advertisement

ಬಿಜೆಪಿ ಕಾರ್ಯಕರ್ತರ ಸಂಭ್ರಮದ ವಿಜಯೋತ್ಸವ

12:47 AM Jun 01, 2019 | Sriram |

ಕುಂಬಳೆ: 17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ದೇಶದಾದ್ಯಂತ ಬಿ.ಜೆ.ಪಿ. 303 ಲೋಕಸಭಾ ಸದಸ್ಯರ ಸ್ಪಷ್ಟ ಬಹುಮತದೊಂದಿಗೆ ಗೆದ್ದು ದ್ವಿತೀಯ ಬಾರಿಗೆ ಗದ್ದುಗೆ ಏರಿದ ನರೇಂದ್ರಮೋದಿಯವರ ಸಚಿವರ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸುವ ವಿಜಯೋತ್ಸವವು ಮೇ 30ರಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಬಿ.ಜೆ.ಪಿ. ವತಿಯಿಂದ ಅದ್ದೂರಿಯಾಗಿ ನಡೆಯಿತು.

Advertisement

ಕುಂಬಳೆಯಲ್ಲಿ ಬದಿಯಡ್ಕ ರಸ್ತೆ ಪಕ್ಕದಲ್ಲಿ ಎಲ್.ಸಿ.ಡಿ.ಪರದೆ ಅಳವಡಿಸಿ ನರೇಂದ್ರ ಮೋದಿ ತಂಡದ ಪಟ್ಟಾಭಿಷೇಕದ ದೃಶ್ಯವನ್ನು ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಮಾಡಲಾಯಿತು.ಅಲ್ಲದೆ ನೆರೆದ ಎಲ್ಲರಿಗೂ ಸಿಹಿತಿಂಡಿ ಮತ್ತು ಚಹಾ ವಿತರಿಸಲಾಯಿತು.

ಪೆರ್ಲ, ಮಂಜೇಶ್ವರ, ಉಪ್ಪಳ, ಬಾಡೂರುಪದವು, ಸೀತಾಂಗೋಳಿ, ಮಜಿರ್‌ಪ್ಪಳ್ಳ, ವರ್ಕಾಡಿ, ಮೀಂಜ ಮುಂತಾದೆಡೆಗಳಲ್ಲಿ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪೈವಳಿಕೆ ಪಂಚಾಯತ್‌ನ ಪೆರ್ಮುದೆ, ಕುರುಡಪದವು, ಚಿಪ್ಪಾರುಪದವು, ಪೈವಳಿಕೆ ನಗರ, ಕನಿಯಾಲ, ಚಿಪ್ಪಾರು, ಸಜಂಕಿಲ ಮೊದಲಾದೆಡೆಗಳಲ್ಲಿ ವಿಜಯೋ ತ್ಸವವನ್ನು ಆಚರಿಸಲಾಯಿತು.ಕಾರ್ಯ ಕ್ರಮದ ಅಂಗವಾಗಿ ಪಕ್ಷದ ನೂರಾರು ಕಾರ್ಯಕರ್ತರು ಬೈಕ್‌, ಕಾರು ಮೊದಲಾದ ವಾಹನಗಳ ಮೂಲಕ ಮತ್ತು ಪಾದಯಾತ್ರೆಯ ಮೂಲಕ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿದರು. ಅಲ್ಲಲ್ಲಿ ಸಿಡಿಮದ್ದು ಪ್ರದರ್ಶಿಸಲಾಯಿತು. ಹೆಚ್ಚಿನೆಡೆಗಳಲ್ಲಿ ಪಾಯಸ, ಸಿಹಿತಿಂಡಿ, ಪಾನೀಯ ವಿತರಿಸಲಾಯಿತು.

ಬ್ಯಾಂಡ್‌ಮೇಳಕ್ಕೆ ಬಿಜೆಪಿ ಧ್ವಜ ಹಿಡಿದು ಪಕ್ಷದ ಕಾರ್ಯಕರ್ತರು ಮೋದಿ ಮೋದಿ ಬಿಜೆಪಿ ಬಿಜೆಪಿ ಎಂಬುದಾಗಿ ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು. ಕೆಲವು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಯನ್ನು ಸಲ್ಲಿಸುವ ಬೃಹತ್‌ ಫಲಕ ಸ್ಥಾಪಿಸಲಾಯಿತು.

Advertisement

ಪೊಲೀಸರ ಪಕ್ಷಪಾತ ನಿಲುವು
ಪ್ರಧಾನಿ ಪದಗ್ರಹಣದಂದು ಬಿ.ಜೆ.ಪಿ. ವಿಜಯೋತ್ಸವಕ್ಕೆ ಉನ್ನತ ಪೊಲೀಸರ ಆದೇಶದಂತೆ ನಿರ್ಬಂಧವಿದ್ದರೂ ಇದನ್ನು ಲೆಕ್ಕಿಸದೆ ವಿಜಯೋತ್ಸವ ಸಾಂಗವಾಗಿ ನಡೆಯಿತು. ಆಯಾ ಪೊಲೀಸ್‌ ಠಾಣೆಗೆ ಸ್ಥಳೀಯ ಬಿ.ಜೆ..ಪಿ. ನಾಯಕರನ್ನು ಆಮಂತ್ರಿಸಿ ಸಭೆ ನಡೆಸಿ ವಾಹನ ಮೆರವಣಿಗೆ ನಡೆಸಬಾರದು, ಸಿಡಿಮದ್ದು ಸಿಡಿಸಬಾರದು, ಘೋಷ‌ಣೆ ಕೂಗಬಾರದು ಇದರಿಂದ ಗಲಭೆಗೆ ಸಾಧ್ಯತೆ ಇದೆ ಎಂಬುದಾಗಿ ಭಯದ ಭವಿಷ್ಯ ನುಡಿದರು. ಆದರೆ ಪೊಲೀಸರ ನಿಲುವನ್ನು ಒಪ್ಪದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಇದನ್ನು ನಿರ್ಲಕ್ಷಿಸಿ ಸಮಾಧಾನದಿಂದ ವಿಜಯೋತ್ಸವ ಆಚರಿಸಿದರು. ಇತರ ಪಕ್ಷದ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರದ ಪೊಲೀಸರು ಬಿಜೆಪಿ ಕಾರ್ಯಕ್ರಮಕ್ಕೆ ಹೇರಿ ವಿಜಯೋತ್ಸವವನ್ನು ತಡೆಯಲು ಶ್ರಮಿಸಿದ ರಾಜ್ಯ ಆಡಳಿತ ಪಕ್ಷದ ಏಜಂಟರಾಗಿ ವರ್ತಿಸಿದ ಪೊಲೀಸರ ನಿಲುವನ್ನು ಬಿಜೆಪಿ ಖಂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next