Advertisement
ಶ್ರೀ ಶೃಂಗೇರಿ ಜಗದ್ಗುರು ಅಭಿ ನಂದನಾ ಸಮಿತಿಯ ವತಿಯಿಂದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾಂಗಳವರ ಹಾಗೂ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ಮಾದೋತ್ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ವಾಹನ ಮೆರವಣಿಗೆ ಮೂಲಕ ಹೊಸದುರ್ಗ ಶ್ರೀ ಮಾರಿಯಮ್ಮ ಕ್ಷೇತ್ರ ಪರಿಸರ ತಲುಪಿ ಅನಂತರ ಪೂರ್ಣಕುಂಭ ಸ್ವಾಗತ ನೀಡಿ ಶ್ರೀ ವಿಷ್ಣುಧೂಮಾವತಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ಕಾಂಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ. ರಮೇಶನ್ ಅವರು ಅಭಿನಂದನಾ ಪತ್ರ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರು ಆಶೀರ್ವಚನ ನೀಡಿದರು. ಆ ಬಳಿಕ ಶ್ರೀ ಜಗದ್ಗುರು ಗಳವರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ಜರಗಿತು. ಜೂ.28ರಂದು ಪೂರ್ವಾಹ್ನ ವೇದ ಪಾರಾಯಣ, ಶ್ರೀ ಜಗದ್ಗುರುಗಳಿಗೆ ಪಾದಪೂಜೆ ಹಾಗೂ ಭಿಕ್ಷಾ ವಂದನೆ ಜರಗಿತು. ಶ್ರೀ ಜಗದ್ಗುರುಗಳವರು ಮಂತ್ರಾಕ್ಷತೆ ನೀಡಿದರು. ಅಪರಾಹ್ನ ಸಂತರ್ಪಣೆ ನಡೆಯಿತು.
Related Articles
Advertisement