Advertisement

ಕುರಿಯ ಗಣಪತಿ ಶಾಸ್ತ್ರಿ ಅಭಿನಂದನೆ

04:06 PM May 02, 2017 | Team Udayavani |

ಪುತ್ತೂರು: ಯಕ್ಷಗಾನ ಭಾಗವತರಾಗಿ, ಕಲಾವಿದರಾಗಿ 40 ವರ್ಷಗಳ ಕಲಾಸೇವೆಯೊಂದಿಗೆ ರಂಗನಾಯಕ ಬಿರುದಿನೊಂದಿಗೆ ಗುರುತಿಸಿ ಕೊಂಡ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಬೃಹತ್‌ ಅಭಿನಂದನ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸೋಮವಾರ ನಡೆಯಿತು.

Advertisement

ಗಣ್ಯರು, ಅಭಿಮಾನಿಗಳ ಉಪಸ್ಥಿತಿಯಲ್ಲಿ ಫಲಪುಷ್ಪ, ಫಲಕ, ಹಾರಾ ರ್ಪಣೆ, ನಿಧಿಗಳೊಂದಿಗೆ ಕುರಿಯ ಗಣಪತಿ ಶಾಸ್ತ್ರಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಡಾ| ಎಂ. ಪ್ರಭಾಕರ ಜೋಶಿ ಅಭಿನಂದನ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ತಮ್ಮ ಕಲಾ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಹಲವು ಮಂದಿಯನ್ನು ಕುರಿಯ ಗಣಪತಿ ಶಾಸ್ತ್ರಿ ಹಾಗೂ ಶ್ಯಾಮಲಾ ಗಣಪತಿ ಶಾಸ್ತ್ರಿ ದಂಪತಿ ಸಮ್ಮಾನಿಸಿದರು. ಅಭಿನಂದನ ಗ್ರಂಥವನ್ನು ಶ್ರೀ ಕಟೀಲು ಆನುವಂಶಿಕ ಮೊಕ್ತೇಸರ ವೇ| ಮೂ| ವಾಸುದೇವ ಆಸ್ರಣ್ಣ ಹಾಗೂ ನೆನಪಿನ ಸಂಚಿಕೆಯನ್ನು ಕರ್ಣಾಟಕ ಬ್ಯಾಂಕ್‌ ಮಂಗಳೂರು ಮುಖ್ಯ ಮಹಾಪ್ರಬಂಧಕ ಬಿ. ಚಂದ್ರಶೇಖರ ರಾವ್‌ ಬಿಡುಗಡೆಗೊಳಿಸಿದರು.
ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಭಿನಂದನ ಸಮಿತಿ ಗೌರವಾಧ್ಯಕ್ಷ ಹಾಗೂ ಕೆಪಿಎಸ್‌ಸಿ ಅಧ್ಯಕ್ಷ ಟಿ. ಶ್ಯಾಮ್‌ ಭಟ್‌, ಕಟೀಲು ಮೇಳಗಳ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ, ಕಲ್ಲಾಡಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಕಿಶನ್‌ ಹೆಗ್ಡೆ, ವಿಶ್ರಾಂತ ಉಪನ್ಯಾಸಕ ಪ್ರೊ| ವಿ.ಬಿ. ಅರ್ತಿಕಜೆ, ವಿಶ್ರಾಂತ ಉಪನ್ಯಾಸಕ ಬಿ. ಜನಾರ್ದನ ಭಟ್‌, ಡಾ| ಪದ್ಮನಾಭ ಕಾಮತ್‌, ರಾಘವ ಚೌಟ ಕಟೀಲು ಮೊದಲಾದವರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next