Advertisement

ಮತಯಂತ್ರ ತಿರುಚಿ ಗೆದ್ದ ಬಿಜೆಪಿಗೆ ಅಭಿನಂದನೆ: ಹಾರ್ದಿಕ್‌ ಪಟೇಲ್‌

03:46 PM Dec 18, 2017 | Team Udayavani |

ಹೊಸದಿಲ್ಲಿ : ”ಎಟಿಎಂ ಯಂತ್ರಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂದಾದರೆ ಮತಯಂತ್ರಗಳನ್ನು ಕೂಡ ಹ್ಯಾಕ್‌ ಮಾಡಲು ಸಾಧ್ಯ” ಎಂದಿರುವ ಪಾಟಿದಾರ್‌ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌, “ಮತಯಂತ್ರಗಳನ್ನು ತಿರುಚಿ ಗುಜರಾತ್‌ ಚುನಾವಣೆ ಗೆದ್ದಿರುವ ಬಿಜೆಪಿಗೆ ಹಾರ್ದಿಕ ಅಭಿನಂದನೆಗಳು” ಎಂದು ವ್ಯಂಗ್ಯವಾಡಿದ್ದಾರೆ.

Advertisement

ಇವಿಎಂ ತಿರುಚುವಿಕೆ ಈ ಚುನಾವಣೆಯಲ್ಲಿ ನಿಜಕ್ಕೂ ದೊಡ್ಡ ವಿಷಯವೇ ಹೌದು; ಸೂರತ್‌ ಮತ್ತು ರಾಜ್‌ಕೋಟ್‌ನಲ್ಲಿ ಇವಿಎಂ ಸಮಸ್ಯೆಗಳು ಇದ್ದವು; ಮತ ಎಣಿಕೆಯಲ್ಲಿ ಅಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮೂರು ದಿನಗಳ ಕಾಲ ನಾನು ಮತಯಂತ್ರ ತಿರುಚುವಿಕೆ ವಿಷಯವನ್ನು ಎತ್ತುತ್ತಾ ಬಂದಿದೆ. ಮತ ಯಂತ್ರಗಳ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ; ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ; ಆದರೂ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಹಾರ್ದಿಕ್‌ ಹೇಳಿದ್ದಾರೆ. 

“ಒಟ್ಟಿನಲ್ಲಿ ಗುಜರಾತ್‌ ಚುನಾವಣಾ ಫ‌ಲಿತಾಂಶವನ್ನು ಕಂಡಾ ಗುಜರಾತ್‌ ಜನರು ಕೊನೆಗೂ ಗಾಢವಾದ ನಿದ್ದೆಯಿಂದ ಎದ್ದಿದ್ದಾರೆ ಎನ್ನಬಹುದು. ಜನರು ಬದಲಾವಣೆಗಾಗಿ ಮತ ಹಾಕಿದ್ದಾರೆ.ಆದುದರಿಂದ ಈ ದಿಶೆಯಲ್ಲಿ ಇನ್ನೂ ಹೆಚ್ಚಿನ ಪ್ರಯತ್ನ ಆಗಬೇಕಿದೆ’ ಎಂದು ಹಾರ್ದಿಕ್‌ ಪಟೇಲ್‌ ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next