Advertisement

ಕಾಂಗೋ ಸೇನಾ ವಿಮಾನ ಪತನ: 30 ಯೋಧರ ಸಾವು

07:05 AM Oct 01, 2017 | |

ಕಿನ್ಶಾಸಾ: ಕಾಂಗೋ ಸೇನೆಗೆ ಸೇರಿರುವ ವಿಮಾನವೊಂದು ಕಿನ್ಶಾಸಾ ಬಳಿ ಶನಿವಾರ ಪತನಗೊಂಡಿದ್ದು, ಅದರಲ್ಲಿದ್ದ 30 ಮಂದಿ ಯೋಧರು ಮೃತಪಟ್ಟಿದ್ದಾರೆ. 

Advertisement

ದಿ ಆ್ಯಂಟನೋವ್‌ ಎಂಬ ಹೆಸರಿನ ವಿಮಾನವು ಟೇಕ್‌ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ಅದರೊಳಗೆ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅದರಲ್ಲಿ ರಷ್ಯಾದ ಸಿಬಂದಿ, ಯೋಧರು ಹಾಗೂ ಎರಡು ವಾಹನಗಳು ಮತ್ತು ಶಸ್ತ್ರಾಸ್ತ್ರಗಳು ಇದ್ದವು ಎಂದು ಮೂಲಗಳು ತಿಳಿಸಿವೆ. ವಿಮಾನವು ಕಣ್ಣೆದುರೇ ಪತನಗೊಂಡಿತು. ಆದರೆ, ಅದರಲ್ಲಿ ಬೆಂಕಿ ಅಥವಾ ಹೊಗೆ ಕಾಣಿಸಿಕೊಂಡಿರ ಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next