Advertisement
ಘಟನೆ ಖಂಡಿಸಿ ಮಹಿಳೆಯರು ಸೇರಿ ಸುಮಾರು 15ಕ್ಕೂಅಧಿಕ ಆಫ್ರಿಕಾ ಪ್ರಜೆಗಳು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟಿಸಿದಲ್ಲದೆ, ಪೊಲೀಸರಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಠಿಚಾರ್ಜ್ ನಡೆಸಿ ಸುಮಾರು 10ಕ್ಕೂಅಧಿಕ ಮಂದಿ ಆಫ್ರಿಕಾ ಪ್ರಜೆಗಳನ್ನುಬಂಧಿಸಲಾಯಿತು.
ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೆ,ರಾಜ್ಯ ಮಾನವ ಹಕ್ಕುಗಳ ಆಯೋಗ, ರವಾಂಡ ರಾಯಭಾರಿ ಕಚೇರಿ ಅಧಿಕಾರಿಗಳಿಗೆ
ಮಾಹಿತಿ ನೀಡಲಾಗಿದೆ. ಏನಿದು ಘಟನೆ?: ನಗರದಲ್ಲಿ ಡ್ರಗ್ಸ್ ಹಾವಳಿ ತಡೆಯಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಭಾನುವಾರ ರಾತ್ರಿ10.30ರ ಸುಮಾರಿಗೆ ಜೆ.ಸಿ.ನಗರ ಠಾಣೆಯ ಪಿಎಸ್‌ಐ ರಘುಪತಿ ಮತ್ತು ತಂಡ ಗ್ರಾಹಕರ ಸೋಗಿನಲ್ಲಿ ಬಂಜಾರ ಲೇಔಟ್‌ನ 10ನೇ ಕ್ರಾಸ್ ಬಳಿ ಜೋನ್ ಹಾಗೂ ಇನ್ನೊಬ್ಬ ವಿದೇಶಿ ಪ್ರಜೆಯನ್ನುಮಾಲು ಸಮೇತ ಬಂಧಿಸಲುಮುಂದಾಗಿತ್ತು.ಆದರೆ, ಅದೇ ವೇಳೆ ಹೊಯ್ಸಳ ವಾಹನ ಬಂದಿದ್ದರಿಂದ ಆರೋಪಿಗಳು ಪರಾರಿಯಾಗಿದ್ದರು. ನಂತರ ತಡರಾತ್ರಿ 12.30ರ ಸುಮಾರಿಗೆ ಹೆಣ್ಣೂರು ಠಾಣೆ ವ್ಯಾಪ್ತಿಯ ಬಾಬುಸಾಬ್ ಪಾಳ್ಯಕ್ಕೆ ಬರುವಂತೆ
ಆರೋಪಿಗಳು ಸೂಚಿಸಿದ್ದರು. ಬಳಿಕ ಪಿಎಸ್‌ಐ ರಘುಪತಿ ಪೊಲೀಸ್ ಬಾತ್ಮೀದಾರರ ಜತೆಗೆ ಸ್ಥಳಕ್ಕೆ ಹೋಗುತ್ತಿದ್ದಂತೆ ಜೋನ್ ಜತೆ ದ್ವಿಚಕ್ರ
ವಾಹನದಲ್ಲಿ ಕುಳಿತಿದ್ದ ಆರೋಪಿ, ಪೊಲೀಸ್ ಬಾತ್ಮೀದಾರನನ್ನು ಗುರುತಿಸಿದ್ದರಿಂದ ಪರಾರಿಯಾಗಲು ಯತ್ನಿಸಿದ್ದಾರೆ.
Related Articles
ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಒಂದು ಗಂಟೆಗಳಕಾಲ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ,6.45ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
Advertisement
ಈ ಕೂಡಲೇ ಆತನ ಪಾಸ್‌ಪೋರ್ಟ್, ವೀಸಾ ಬಗ್ಗೆ ಪ್ಯಾನ್ ಆಫ್ರಿಕನ್ ಒಕ್ಕೂಟದ ಅಧ್ಯಕ್ಷ ಬಾಸ್ಕೊಗೆ ಮಾಹಿತಿ ನೀಡಲಾಯಿತು. ಈ ವೇಳೆಜೋನ್ ಕಾಂಗೋ ಪ್ರಜೆಯಾಗಿದ್ದು, ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಆರೋಪಿಯ ವೀಸಾ ಅವಧಿ 2016ರಲ್ಲಿ ಮತ್ತು
2017ರಲ್ಲಿ ಪಾಸ್‌ಪೋರ್ಟ್ ಅವಧಿ ಮುಕ್ತಾಯಗೊಂಡಿದೆ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಪೊಲೀಸರಿಂದ ಹಣಕ್ಕೆ
ಬೇಡಿಕೆ ಆರೋಪ
ಜೋನ್ ಬಂಧಿಸಿದ ಪೊಲೀಸರು ಆತನನ್ನು ಬಿಡುಗಡೆ ಮಾಡಲು ಸುಮಾರು 10-30 ಸಾವಿರ ರೂ.ವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆತ ಕೊಡಲು ನಿರಾಕರಿಸಿದಾಗ ಠಾಣೆಯಲ್ಲೇ ಆತನಮೇಲೆ ಹಲ್ಲೆ ನಡೆಸಿ, ಕೊಂದಿದ್ದಾರೆ ಎಂದು ಆರೋಪಿಸಿ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದರು. ಬಳಿಕ ಠಾಣಾಧಿಕಾರಿ ಮುನಿಕೃಷ್ಣ ಮತ್ತು ಜೆ .ಸಿ. ನಗರ ಎಸಿಪಿ ರೀನಾ ಸುವರ್ಣ ಪ್ರತಿಭಟನಾಕಾರರನ್ನು ಮನವೊಲಿಸಿದರು
ಸುಮ್ಮನಾಗ ಲಿಲ್ಲ. ಅಲ್ಲದೆ, ಆಫ್ರಿಕಾ ಪ್ರಜೆ ಮಹಿಳಾ ಪ್ರಜೆ ಸೇರಿ ಇಬ್ಬರು ಠಾಣೆ ಮುಂಭಾಗ ಮಲಗಿ ಜೋನ್ ಬಂಧಿಸಿದ ಪೊಲೀಸರನ್ನು ನಮ್ಮ ಮುಂದೆ ಕರೆತರಬೇಕೆಂದು ಒತ್ತಾಯಿಸಿದರು. ಅಲ್ಲದೆ, ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಅನಂತರ ಇತರೆ ಪ್ರಜೆಗಳು ಪೊಲೀಸರ ವಿರುದ್ದ ಕೂಗಾಡುತ್ತಾ ಜೋನ್ ಫೋಟೋ ಹಿಡಿದು ಠಾಣೆಗೆ ನುಗ್ಗಲು ಯತ್ನಿಸಿದರು. ಪೊಲೀಸರು ತಡೆದಾಗ ಮತ್ತೊಮ್ಮೆ ಠಾಣೆ ಮುಂಭಾಗ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಹಣಕ್ಕೆ ಬೇಡಿಕೆ ಇಟ್ಟಿಲ್ಲ
ಈ ಕುರಿತು ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ, ನಸುಕಿನಲ್ಲಿ ಜೋನ್‌ನನ್ನುಕರೆತಂದು ಕಾನೂನು ಪ್ರಕಾರವಾಗಿಯೇ ಆತನ ವಿಚಾರಣೆ ನಡೆಸಲಾಗಿದೆ.ಯಾವುದೇ ಅಧಿಕಾರಿ-ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಇದು ಸುಳ್ಳು.ಕಾನೂನು ಸುವ್ಯವಸ್ಥೆ ಮತ್ತು ಆತ್ಮರಕ್ಷಣೆಗಾಗಿ ಬಲಪ್ರಯೋಗ ಮಾಡಲಾಗಿದೆ. ಪ್ರತಿಭಟನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಪೂರ್ವಪರ ವಿಚಾರಿಸಲಾಗುತ್ತದೆ. ಜತೆಗೆ ಬಂಧಿತರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ. ಇದರೊಂದಿಗೆ ಪರಾರಿಯಾಗಿರುವ ಇತರೆ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ. ಮೃತ ಜೋನ್ ಬಗ್ಗೆ ಆತನ ಪೋಷಕರಿಗೆ ಮಾಹಿತಿ ನೀಡುವಂತೆ ರಾಯಭಾರಕಚೇರಿ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದರು ಸಾವಿನ ಪ್ರಕರಣ ಸಿಐಡಿಗೆ ವರ್ಗಾವಣೆ
ಪೊಲೀಸರ ವಶದಲ್ಲಿದ್ದ ಜೋನ್ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪ್ರಕರಣವನ್ನು ಸಿಐಡಿಗೆ ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಸಿಐಡಿಯ ಎಸ್ಪಿ ವೆಂಕಟೇಶ್ ಅವರು ತಮ್ಮ ತಂಡದೊಂದಿಗೆ ಜೆ.ಸಿ.ನಗರ ಠಾಣೆಗೆ ಬಂದು ಪ್ರಕರಣದ ಮಾಹಿತಿ ಸಂಗ್ರಹಿಸಿದ್ದಾರೆ. ಮತ್ತೂಂದೆಡೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಮಾಹಿತಿ ನೀಡಲಾಗಿದ್ದು, ಆಯೋಗದ ಕೆಲಸ ಸದಸ್ಯರು ಠಾಣೆಗೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ. ಕೆಟ್ಟ ಸನ್ನೆ ತೋರಿಸಿದ ಆಫ್ರಿಕಾ ಪ್ರಜೆಗಳು
ಪ್ರತಿಭಟನಾಕಾರರು ಒಂದೊಲ್ಲೊಂದು ರೀತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮುಂದಾಗಿದ್ದರು. ಈ ನಡುವೆಕೆಲವರು ಮಹಿಳಾ ಅಧಿಕಾರಿ-ಸಿಬ್ಬಂದಿಗೆಕೆಟ್ಟದಾಗಿ ಕೈ ಸನ್ನೆ ತೋರಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರು ನಡುವೆ ವಾಗ್ವಾದ ತಳ್ಳಾಟ, ನೂಕಾಟ ನಡೆಯಿತು ಆಟೋ, ಟೆಂಪೋದಲ್ಲಿಕರೆದೊಯ್ದರು!
ಪ್ರತಿಭಟನಾಕರನ್ನು ವಶಕ್ಕೆಪಡೆಯಲು ಮುಂದಾದರು.ಆಗ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಸಮವಸ್ತ್ರ ಹಿಡಿದು ಎಳೆದಾಡಿದ್ದರು.ಆಗ ಆತ್ಮರಕ್ಷಣೆಗಾಗಿಲಾಠಿಪ್ರಹಾರ ನಡೆಸಿದ್ದು,ಪರಾರಿಯಾಗಲುಯತ್ನಿಸಿದರು.ಆಗ ಎಲ್ಲೆಡೆ ಸುತ್ತುವರಿದಿದ್ದಪೊಲೀಸರು ಠಾಣೆ ಮುಂಭಾಗ ರಸ್ತೆಗಳಲ್ಲಿ ಅಟ್ಟಾಡಿಸಿ ಲಾಠಿಪ್ರಹಾರ ನಡೆಸಿ ಸುಮಾರು 10ಕ್ಕೂಅಧಿಕ ಮಂದಿ ಬಂಧಿಸಿದ್ದಾರೆ. ಠಾಣೆ ಮುಂಭಾಗ ಸಂಚಾರ ದಟ್ಟಣೆ
ಆಫ್ರಿಕಾ ಪ್ರಜೆಗಳ ಪುಂಡಾಟಕ್ಕೆ ಜೆ.ಸಿ.ನಗರ ಠಾಣೆಯ ಮುಂಭಾಗದಲ್ಲಿ ಸುಮಾರು ಒಂದೂವರೆ ಗಂಟೆಗಳಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಎಲ್ಲ ಆರೋಪಿಗಳನ್ನು ಬಂಧಿಸಿದ ಬಳಿಕ ಸಂಚಾರಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 5 ವರ್ಷಗಳ ಹಿಂದೆಯೂ ದಾಳಿ
ಬೆಂಗಳೂರು: ಆಫ್ರಿಕಾ ಪ್ರಜೆಗಳ ಪುಂಡಾಂಟ ಈ ಹಿಂದೆಯೂ ನಡೆದಿದೆ. ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ನಾಲ್ಕೈದು ವರ್ಷಗಳಹಿಂದೆ ಸೋಲದೇವನಹಳ್ಳಿಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂದು ಆರೋಪಿಸಿ, ಮದ್ಯದ ಅಮಲಿನಲ್ಲಿ ರಸ್ತೆ ಬದಿ ನಿಂತಿದ್ದ ಕಾರುಗಳು, ದ್ವಿಚಕ್ರವಾಹನಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದ
ರು. ಮೆಜೆಸ್ಟಿಕ್‌ನಲ್ಲಿರುವ ಬೆಂಗಳೂರು ಸೆಂಟ್ರಲ್‌ನಲ್ಲಿ ನೈಜಿರಿಯಾದ ಮಹಿಳಾ ಈಪ್ರಜೆಯೊಬ್ಬಳು ತನ್ನ ಪ್ರಿಯಕರನ ಜತೆ ಬಂದಾಗ ಅಂಗಡಿ ವ್ಯಾಪಾರಿ ಜತೆ ಗಲಾಟೆಮಾಡಿಕೊಂಡಿದ್ದಳು. ನಂತರ ಮದ್ಯದ ಅಮಲಿನಲ್ಲಿ ಅಂಗಡಿಯನ್ನು ಚೆಲ್ಲಾಪಿಲ್ಲಿ ಮಾಡಿದ್ದಳು. ಈ ಸಂಬಂಧ ಪೊಲೀಸರು ಬಂಧಿಸಲು ಹೋದಾಗ ಪೊಲೀಸ್‌ಸಿಬ್ಬಂದಿ ಮೇಲೆಯೆ ಹಲ್ಲೆ ನಡೆಸಿದ್ದಳು. ಬಳಿಕ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಾಗ ಅಲ್ಲಿಯೂ ಪಿಎಸ್‌ಐ ಮತ್ತು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.ಕನಕಪುರ ರಸ್ತೆಯಲ್ಲಿಯೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ್ದರು. ಪಿಎಸ್‌ಐ ಮೇಲೆ ಹಲ್ಲೆ
ಬಳಿಕ ಸ್ಥಳಕ್ಕೆಬಂದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಪ್ರತಿಭಟನಾಕಾರರಿಗೆ ವಾಸ್ತಂಶ ತಿಳಿಸಿ ಮನವೊಲಿಸಲು ಯತ್ನಿಸಿದರು. ಆದರೆ, ಪ್ರತಿಭಟನಾಕಾರರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಡಿಸಿಪಿ ಪಕ್ಕದಲ್ಲಿ ನಿಂತಿದ್ದ ಸಿಬ್ಬಂದಿಯೊಬ್ಬರಿಂದಲಾಠಿ ಕಸಿದುಕೊಂಡು ಡಿಸಿಪಿ ಹಾಗೂಹಿರಿಯ ಅಧಿಕಾರಿಗಳ ಮೇಲೆ ಹಲ್ಲೆಗೆಯತ್ನಿಸಿದ್ದಾನೆ. ಆಗ ಕೂಡಲೇ ಪ್ರತಿಭನಾಟಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಮೃತನಬಾಯಲ್ಲಿ ನೊರೆ
ಹೃದಯಾಘಾತದಿಂದ ಮೃತಪಟ್ಟ ಜೋನ್ ಬಾಯಲ್ಲಿ ನೊರೆಬಂದಿದ್ದು, ಪೊಲೀಸರೇ ಹಲ್ಲೆ ಮಾಡಿಕೊಂದಿದ್ದಾರೆ. ಹಣಕೊಡದಕ್ಕೆ ಜೋನ್ ಕೊಲೆ
ಮಾಡಲಾಗಿದೆ ಎಂದುಆಫ್ರಿಕಾ ಪ್ರಜೆಗಳ ಅಸೋಸಿಯೇಷನ್ ಗಂಭೀರ ಆರೋಪ ಮಾಡಿದೆ. ಹಲ್ಲೆ ಸಹಿಸಲ್ಲ: ಪೊಲೀಸ್ ಆಯುಕ್ತ
ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿದ್ದು,ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಮಾರ್ಗಸೂಚಿ ಅನ್ವಯ ತನಿಖೆ ನಡೆಯಲಾಗಿದೆ. ಮರಣೋತ್ತರ ಪರೀಕ್ಷೆ ಕೂಡಇಬ್ಬರುವೈದ್ಯರು, ನ್ಯಾಯಾಧೀಶರ ಸಮ್ಮುಖದಲ್ಲಿ ವಿಡಿಯೋ ಚಿತ್ರೀಕರಣದ ಮೂಲಕ ನಡೆಯಲಿದೆ. ಪೊಲೀಸರ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ.ಹಲ್ಲೆ ನಡೆಸಿದ ಪ್ರತಿಯೊಬ್ಬರ ಹಿನ್ನೆಲೆ ಪರಿಶೀಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದರು. ನಗರದಲ್ಲಿ ಅನೇಕ ಜನ ಆಫ್ರಿಕನ್ನರಿದ್ದಾರೆ. ಅವರು ಬಹಳ ವಯೊಲೆಂಟ್ ಇರೋದ್ರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಮ್ಮ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮ ವಹಿಸಿದ್ದಾರೆ.
-ಬಸವರಾಜ್‌ಬೊಮ್ಮಾಯಿ, ಮುಖ್ಯಮಂತ್ರಿ ಜೋನ್ ಸಾವಿನ ವಿಚಾರ ತಿಳಿದ ಆಫ್ರಿಕನ್ ಪ್ರಜೆಗಳು, ಪ್ರತಿಭಟನೆ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೀಗ ಅಂತಾರಾ
ಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸ ಬಾರದು. ಸತ್ತವನು ವಿದ್ಯಾರ್ಥಿಯೇ ಅಲ್ಲ. ಆತ ಅಕ್ರಮವಾಗಿಬೆಂಗಳೂರಿನಲ್ಲಿ ವಾಸವಾಗಿದ್ದಾನೆ. ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ.
ಪೊಲೀಸರು ಅವರಕರ್ತವ್ಯ ಮಾಡಿದ್ದಾರೆ.
– ಮೋಹನ್ ಸುರೇಶ್,
ರವಾಂಡ ರಾಯಭಾರ ಕಚೇರಿ ಅಧಿಕಾರಿ