ರಾಯಪುರ: ದ್ವೇಷದ ಮೂಲಕ ಜನರನ್ನು ಸಂಪರ್ಕಿಸಲು ಕಾಂಗ್ರೆಸ್ ಬಯಸುತ್ತದೆ, ಆದರೆ ಪಕ್ಷದ ಹಿಂದಿನ ತಲೆಮಾರುಗಳು ಸಹ ಸಂಘದ ಬಗ್ಗೆ ದ್ವೇಷ ಮತ್ತು ತಿರಸ್ಕಾರವನ್ನು ಹೊಂದಿದ್ದವು ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಅವರು ಸೋಮವಾರ ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್ ಸಮವಸ್ತ್ರದ ಒಂದು ಭಾಗವಾಗಿದ್ದ ಖಾಕಿ ಚಡ್ಡಿಯ ಸುಡುತ್ತಿರುವ ಚಿತ್ರವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ-ಆರ್‌ಎಸ್‌ಎಸ್ ಮಾಡಿದ ಹಾನಿಯನ್ನು ರದ್ದುಗೊಳಿಸಲು ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿತ್ತು.
ಇದನ್ನೂ ಓದಿ:ಕಾಂಗ್ರೆಸ್ ನಿಂದ ಖಾಕಿ ಚಡ್ಡಿ ಸುಡುವ ಚಿತ್ರ ಪೋಸ್ಟ್; ಬಿಜೆಪಿಯಿಂದ ವ್ಯಾಪಕ ಆಕ್ರೋಶ
ಆರ್‌ಎಸ್‌ಎಸ್ ಮೂರು ದಿನಗಳ ಸಮನ್ವಯ ಸಭೆಯ ಮುಕ್ತಾಯದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವೈದ್ಯ, ”ಸಮಾಜದಲ್ಲಿ ಹಿಂದುತ್ವಕ್ಕೆ ಬೆಂಬಲ ಹೆಚ್ಚುತ್ತಿದೆ. ಕಾಂಗ್ರೆಸ್ ದ್ವೇಷದ ಮೂಲಕ ಜನರನ್ನು ಸಂಪರ್ಕಿಸಲು ಬಯಸುತ್ತಾರೆ. ನೀವು ದ್ವೇಷದ ಮೂಲಕ ಭಾರತವನ್ನು ಒಂದುಗೂಡಿಸಲು ಸಾಧ್ಯವೇ? ಅವರು ಬಹಳ ಸಮಯದಿಂದ ನಮ್ಮ ಬಗ್ಗೆ ದ್ವೇಷ ಮತ್ತು ತಿರಸ್ಕಾರವನ್ನು ಹೊಂದಿದ್ದಾರೆ. ಅವರ ಹಿಂದಿನ ತಲೆಮಾರುಗಳು, ಅಜ್ಜ, ಅಪ್ಪ ಸಹ ಆರ್‌ಎಸ್‌ಎಸ್ ಅನ್ನು ತಡೆಯಲು ಪ್ರಯತ್ನಿಸಿದರು. ಆದರೆ ನಾವು ಜನರಿಂದ ಬೆಂಬಲಿತರಾಗಿ ಬೆಳೆಯುತ್ತಲೇ ಇದ್ದೇವೆ” ಎಂದರು.
‘ಅಖಿಲ ಭಾರತೀಯ ಸಮನ್ವಯ ಬೈಠಕ್’ ಆರ್‌ಎಸ್‌ಎಸ್‌ನ ವಾರ್ಷಿಕ ರಾಷ್ಟ್ರೀಯ ಸಮನ್ವಯ ಸಭೆಯಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಅದರ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು.