Advertisement
ಮೂರು ದಶಕಗಳ ಹಿಂದೆ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಆರ್ಥಿಕ ಸುಧಾರಣೆಯ ಕ್ರಮಗಳನ್ನು ಜಾರಿಗೆ ತರಲಾಗಿತ್ತು. ಅದರಿಂದಾಗಿ ಮಧ್ಯಮ ವರ್ಗದ ಕುಟುಂಬದ ಆದಾಯ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಹೆಚ್ಚಿನವರ ಒಲವು ಬಿಜೆಪಿ ಕಡೆಗೆ ಹರಿದಿತ್ತು. ಈ ಬಾರಿ ಅಂಥ ಆತಂಕ ಏನಾದರೂ ಇದೆಯೇ?ಡಾ.ಮನಮೋಹನ್ ಸಿಂಗ್ ಆರ್ಥಿಕ ಉದಾರೀಕರಣ ಘೋಷಣೆ ಮಾಡಿ ದ್ದರಿಂದ ದೇಶದಲ್ಲಿ ಉದ್ಯಮಶೀಲತೆ ಹೆಚ್ಚಿನ ರೀತಿಯಲ್ಲಿ ಬೆಳೆಯಿತು. ಅನಗತ್ಯ ನಿಯಮಗಳನ್ನು ತೆಗೆದು ಹಾಕುವಲ್ಲಿ ನೆರವಾಯಿತು. ಅದು ಮಧ್ಯಮ ವರ್ಗದ ಸದಸ್ಯರಿಗೆ ನೆರವಾ ಯಿತು. ಅದಕ್ಕಿಂತಲೂ ಮೊದಲು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಕಂಪ್ಯೂಟರ್ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆಸಿದರು. ಉದಾರೀಕರಣ ಎಂಬ ವಿಚಾರ ಆ ದಿನಗಳಿಂದಲೇ ಶುರುವಾಯಿತು.
Related Articles
Advertisement
ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಧಾನ ಭರವಸೆಯೇ “ನ್ಯಾಯ್’. ಅದರಿಂದಾಗಿ ಸಿಗುವ ರಾಜಕೀಯ ಲಾಭಗಳೇನು?ಬಡತನ ಎನ್ನುವುದಕ್ಕೆ ಜಾತಿ, ಧರ್ಮ ಇಲ್ಲ. ಯಾರು ಬಡವರಾಗಿದ್ದಾರೆಯೋ ಅವರಿಗೆ ನೆರವಿನ ಹಸ್ತ ಬೇಕು. ಮತಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಿಲ್ಲ. ಬದಲಾಗಿ ಸಹಾಯ ಬೇಕಾದವರಿಗಾಗಿ ನೆರವಾಗಲು ಮುಂದಾಗುತ್ತಿದ್ದೇವೆ. ಹವಾಮಾನ ಬದಲಾವಣೆ ವಿಚಾರ ಪ್ರಣಾಳಿಕೆಯಲ್ಲಿ ಸ್ಥಾನ ಪಡೆದಿದೆ. ವಾಯು ಮಾಲಿನ್ಯವನ್ನು ರಾಷ್ಟ್ರೀಯ ಆರೋಗ್ಯ ತುರ್ತುಪರಿಸ್ಥಿತಿ ಎಂದು ವಿಶ್ಲೇಷಿಸಲಾಗಿದೆ.
ಕೇರಳದಲ್ಲಿ ಉಂಟಾದ ಪ್ರಾಕೃತಿಕ ವಿಕೋಪ ಗಮನಿಸಿದ್ದೀರಿ. ಇನ್ನು ನವದೆಹಲಿಯಲ್ಲಿ ಯಾವ ಪರಿಸ್ಥಿತಿ ಇದೆ ಎಂದು ಗೊತ್ತೇ ಇದೆ. ಶ್ರೀಮಂತ, ಬಡವ ಎಂದು ಬೇಧವೆಣಿಸದೆ ಕಾಡುತ್ತಿದೆ. ನಾವು ಪ್ರಸ್ತಾಪಿಸಿದ ಸಲಹೆಗಳ ಜಾರಿಗೆ ಕೈಗಾರಿಕೆ ಮತ್ತು ಇತರ ವಲಯಗಳಿಂದ ಸಹಮತದ ಅಗತ್ಯವೂ ಇದೆ. ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಕರೆದಿರುವುದರಿಂದ ಎಲ್ಲರ ಗಮನ ಸೆಳೆದಂತಾಗುತ್ತದೆ. (ಸಂದರ್ಶನ ಕೃಪೆ: ನ್ಯೂಸ್18)