Advertisement

ಶಿವಸೇನೆ ಶಾಸಕರಿಗೆ ಬಿಜೆಪಿ ವತಿಯಿಂದ 50 ಕೋಟಿ ರೂ. ಆಫರ್‌: ವಾಡೆಟ್ಟಿವಾರ್‌

09:35 AM Nov 09, 2019 | Team Udayavani |

ಮುಂಬಯಿ: ಸದ್ಯ ಕರ್ನಾಟಕದಂತೆ ಮಹಾರಾಷ್ಟ್ರದ ರಾಜಕೀಯದಲ್ಲಿ ಕುದುರೆ ವ್ಯಾಪಾರ ನಡೆಯುತ್ತಿರುವ ಆರೋಪಗಳು ಕೇಳಿ ಬರಲಾರಂಭಿಸಿದೆ. ಶಿವಸೇನೆ ಶಾಸಕರನ್ನು ಖರೀಧಿಸಲು ಬಿಜೆಪಿಯು 50 ಕೋಟಿ ರೂ.ಗಳ ಆಫರ್‌ ನೀಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ವಿಜಯ್‌ ವಾಡೆಟ್ಟಿವಾರ್‌ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನ ಕೆಲವು ಶಾಸಕರಿಗೆ ಬಿಜೆಪಿಯಿಂದ ಕರೆಗಳು ಬಂದಿದೆ. ನಮ್ಮ ಶಾಸಕರನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸಿದೆ. ಆದರೆ, ನಮ್ಮ ಶಾಸಕರನ್ನು ಸುರಕ್ಷಿತರಾಗಿದ್ದಾರೆ. ನಮ್ಮ ಯಾವುದೇ ಶಾಸಕರು ವಿಭಜನೆಯಾಗುವುದಿಲ್ಲ ಎಂದು ವಿಜಯ್‌ ವಾಡೆಟ್ಟಿವಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಇಗತ್ಪುರಿಯ ಕಾಂಗ್ರೆಸ್‌ ಶಾಸಕ ಹಿರ್ಮಾನ್‌ ಖೋಸ್ಕರ್‌ ಅವರು ಮಾಧ್ಯಮದ ಮೂಲಕ ನನಗೆ ಬಿಜೆಪಿಯಿಂದ ಕರೆ ಬಂದಿದೆ ಎಂದು ಮಾಹಿತಿ ನೀಡಿದರು. ಕೆಲವು ಕಾರ್ಯಕರ್ತರು ಮನೆಗೆ ಭೇಟಿ ನೀಡಲು ಬಂದಿದ್ದರು, ಆದರೆ ನಾನು ಮನೆಯಿಂದ ಹೊರಗೆ ಬಂದಿದ್ದೇನೆ. ಬಿಜೆಪಿ ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಖೋಸ್ಕರ್‌ ಆರೋಪಿಸಿದರು. ಹೀಗಾಗಿ, ಬಿಜೆಪಿಯ ವತಿಯಿಂದ ಕರೆ ಬಂದರೆ, ಫೋನ್‌ಗಳನ್ನು ಟ್ಯಾಪ್‌ ಮಾಡಿ, ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ ಬಹಿರಂಗಪಡಿಸಬೇಕು ಎಂದು ಶಾಸಕರಿಗೆ ಸೂಚನೆ ನೀಡಿದ್ದೇವೆ ಎಂದು ವಾಡೆಟ್ಟಿವಾರ್‌ ಹೇಳಿದರು. ನಮ್ಮ ಶಾಸಕರು ರಾಜ್ಯದಲ್ಲಿ ಸುರಕ್ಷಿತರಾಗಿದ್ದಾರೆ ಮತ್ತು ಯಾರನ್ನೂ ಜೈಪುರಕ್ಕೆ ಕಳುಹಿಸಲಾಗಿಲ್ಲ ಎಂದು ವಾಡೆಟ್ಟಿವಾರ್‌ ಹೇಳಿದ್ದಾರೆ.

ತಮ್ಮ ಕುಟುಂಬ ಸದಸ್ಯರೊಂದಿಗೆ ಕೆಲವು ಶಾಸಕರು ವೈಯಕ್ತಿಕವಾಗಿ ಜೈಪುರ ಪ್ರವಾಸ ಕೈಗೊಂಡಿರಬಹುದು. ಚುನಾವಣಾ ಅವಧಿಯಲ್ಲಿ ಎಲ್ಲ ಶಾಸಕರು ದಣಿದಿದ್ದರಿಂದ, ಅವರು ವಾತಾವರಣದ ಬದಲಾವಣೆಗಾಗಿ ಜೈಪುರಕ್ಕೆ ಹೋಗಿರಬಹುದು ಎಂದು ವಾಡೆಟ್ಟಿವಾರ್‌ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯು ಇತರ ಪಕ್ಷಗಳ ನಾಯಕರನ್ನು ವಿಭಜಿಸುವ ಕಾರ್ಯದಲ್ಲಿ ತೊಡಗಿತ್ತು. ಹಾಗೆಯೇ ಪ್ರಸಕ್ತ ನಮ್ಮ ಶಾಸಕರನ್ನು ವಿಭಜನೆ ಆದರೆ, ಅಂತಹ ಶಾಸಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ವಾಡೆಟ್ಟಿವಾರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next