Advertisement

ಕಾಂಗ್ರೆಸ್ ವೈಡ್, ಆಪ್ ನೋ ಬಾಲ್, ಬಿಜೆಪಿಯದ್ದು ಗುಡ್ ಲೆಂತ್ ಡೆಲಿವರಿ: ರಾಜನಾಥ್ ಸಿಂಗ್

07:44 PM Nov 07, 2022 | Team Udayavani |

ಕಂಗ್ರಾ: ಬಿಜೆಪಿಯ ಹಿರಿಯ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಕ್ರಿಕೆಟ್ ಸಾದೃಶ್ಯಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಕೆಣಕಿದ್ದು, ಕಾಂಗ್ರೆಸ್ ಅನ್ನು “ವೈಡ್ ಬಾಲ್” ಮತ್ತು ಎಎಪಿಯನ್ನು “ನೋ ಬಾಲ್” ಎಂದು ಕರೆದಿದ್ದಾರೆ.

Advertisement

ಹಿಮಾಚಲ ಪ್ರದೇಶದ ಬೈಜ್‌ನಾಥ್ ಮತ್ತು ಬಲ್ಹ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ರಾಜಕೀಯದ ಪಿಚ್‌ನಲ್ಲಿ ಬಿಜೆಪಿ ಏಕೈಕ “ಗುಡ್ ಲೆಂತ್ ಡೆಲಿವರಿ” ಎಂದು ಬಣ್ಣಿಸಿದರು.

ಹಿಮಾಚಲ ಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವ ಬಿಜೆಪಿಯ ಸಂಕಲ್ಪ ಮತ ಪಡೆಯುವುದಕ್ಕಲ್ಲ ಎಂದು ಅವರು ಪ್ರತಿಪಾದಿಸಿ, ಕಾಂಗ್ರೆಸ್ ನವರು ಮತ ಪಡೆಯಲು ಹೀಗೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಸಮಾಜವನ್ನು ವಿಭಜಿಸಿ ಮತ ಪಡೆಯಲು ನಾವು ಬಯಸುವುದಿಲ್ಲ. ಗೋವಾದಲ್ಲಿ ಹಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಗೋವಾದಲ್ಲಿ ಸಮಾಜ ಒಡೆಯಿತೇ” ಎಂದು ಸಿಂಗ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next