Advertisement

ನ.ರಾ.ಕ್ಷೇತ್ರದಲ್ಲಿ ಕೆಲ ಮತಗಟ್ಟೆಗಳಲ್ಲಿ ಗೊಂದಲ

01:04 PM May 13, 2018 | Team Udayavani |

ಮೈಸೂರು: ಎರಡು ಸಮುದಾಯಗಳ ನೇರ ಪೈಪೋಟಿಗೆ ಸಾಕ್ಷಿಯಾಗಿರುವ ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಹಲವು ಬೂತ್‌ಗಳಲ್ಲಿ ಮತಪಟ್ಟಿ ಗೊಂದಲ ಹೊರತುಪಡಿಸಿ ಕ್ಷೇತ್ರದೆಲ್ಲೆಡೆ ಬಹುತೇಕ ಶಾಂತಿಯುತ ಮತದಾನ ನಡೆಯಿತು.

Advertisement

ತೀವ್ರ ಕುತೂಹಲ ಮೂಡಿಸಿರುವ ಈ ಬಾರಿಯ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮತಗಟ್ಟೆಗಳಿಗೆ ತೆರಳಿದ ಮತದಾರರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಕ್ಷೇತ್ರದ ಕ್ಯಾತಮಾರನಹಳ್ಳಿ, ಕಲ್ಯಾಣಗಿರಿ, ಬೀಡಿಕಾಲೋನಿ ಸೇರಿದಂತೆ ಹಲವು ಕಡೆಗಳಲ್ಲಿ ಮತಪಟ್ಟಿಯಲ್ಲಿ ಗೊಂದಲ,

ತಿಲಕ್‌ನಗರದ ಮೂಲಸೌಕರ್ಯಕ್ಕಾಗಿ ಮತದಾರರ ಪ್ರತಿಭಟನೆ ಹೊರತುಪಡಿಸಿ ಬೇರೆ ಗೊಂದಲಗಳಿಲ್ಲದೆ ಯಶಸ್ವಿ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದಲೇ ಮತ ಕೇಂದ್ರಗಳಿಗೆ ಲಗ್ಗೆಯಿಟ್ಟ ಮತದಾರರು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ಮತ ಚಲಾಯಿಸಿದರು.

ಮತಪಟ್ಟಿ ಗೊಂದಲ: ಚುನಾವಣೆಯ ಮುನ್ನಾದಿನದಂದು ಎನ್‌.ಆರ್‌.ಕ್ಷೇತ್ರದಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವೆಂಬಂತೆ ಕ್ಷೇತ್ರ ವ್ಯಾಪ್ತಿಯ ಬಹುತೇಕ ಮತ ಕೇಂದ್ರಗಳಲ್ಲಿ ಉಂಟಾದ ಮತಪಟ್ಟಿ ಗೊಂದಲದಿಂದ ಅನೇಕ ಮತದಾರರು ಸಮಸ್ಯೆ ಎದುರಿಸಿದರು.

ಪ್ರಮುಖವಾಗಿ ಕ್ಯಾತಮಾರನಹಳ್ಳಿಯ ಮತಗಟ್ಟೆ ಸಂಖ್ಯೆ 118, ಕೆ.ಎನ್‌.ಪುರದ 133, 134 ಹಾಗೂ 135, ಬೀಡಿ ಕಾಲೋನಿಯ ಮತಗಟ್ಟೆ 170, ಅಜೀಜ್‌ಸೇs… ನಗರದ 167, 168, 169, ರಾಜೀವ್‌ನಗರದ 158 ಸಂಖ್ಯೆಯ ಮತಗಟ್ಟೆಗಳಲ್ಲಿ ಗೊಂದಲ ಕಂಡುಬಂದಿತು.

Advertisement

ಕೆಲವು ಕಡೆಗಳಲ್ಲಿ ಮತಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಅನೇಕರು ಮತದಾನದ ಹಕ್ಕು ಕಳೆದುಕೊಂಡು, ನಿರಾಶೆಯಿಂದ ಮನೆಗೆ ತೆರಳಿದರು. ಅಜೀಜ್‌ ನಗರ ಮತಗಟ್ಟೆಯಲ್ಲಿ ಮತದಾರರ ಹೆಸರು ಮತಪಟ್ಟಿಯಲ್ಲಿ ತಪ್ಪಾಗಿದ್ದ ಕಾರಣ 150ಕ್ಕೂ ಹೆಚ್ಚು ಮತದಾರರು ಮತಹಾಕಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಚುನಾವಣೆ ಸಂಭ್ಯಮ: ವಿಧಾನಸಭಾ ಚುನಾವಣೆಯಲ್ಲಿ ಎನ್‌.ಆರ್‌.ಕ್ಷೇತ್ರದ ಹಲವು ಕಡೆಗಳಲ್ಲಿ ಚುನಾವಣಾ ಸಂಭ್ರಮ ಮನೆಮಾಡಿತ್ತು. ಮತದಾನದ ಹಿನ್ನೆಲೆಯಲ್ಲಿ 7 ಗಂಟೆಯಿಂದಲೇ ಮತಗಟ್ಟೆಗೆ ತೆರಳಿದ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಹೀಗಾಗಿ ಕ್ಯಾತಮಾರನಹಳ್ಳಿ, ರಾಜೀವ್‌ನಗರ, ಬೀಡಿ ಕಾಲೋನಿ, ಕಲ್ಯಾಣಗಿರಿ, ಎನ್‌.ಆರ್‌.ಮೊಹಲ್ಲಾ, ರಾಜೇಂದ್ರನಗರಗಳ ಮತಕೇಂದ್ರಗಳಲ್ಲಿ ಮತದಾನ ಮಾಡಿದರು. ಬೇಸಿಗೆಯ ಬಸಿಲಿನ ತಾಪವನ್ನು ಲೆಕ್ಕಿಸದ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next