Advertisement
ಜಿ.ಪಂ ಸದಸ್ಯ ಬಾಬು ಹೆಗ್ಡೆ ಅವರ ಜತೆ ಮಾತುಕತೆ ನಡೆಸಿ ಬಿಜೆಪಿ ಗೆಲ್ಲಿಸಿ ಕಾಂಗ್ರೆಸ್ಸಿನ ಗೋಪಾಲ ಪೂಜಾರಿ ಅವರನ್ನು ಸೋಲಿಸಲು ಹೋರಾಟ ಮಾಡಬೇಕೆಂದು ಮನವಿ ಮಾಡಿದ್ದಾರೆ.ಕುಂದಾಪುರದಲ್ಲಿ ಬಾಂಡ್ಯ ಸುಭಾಷ್ ಶೆಟ್ಟಿ ಅವರ ಮನೆಯಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ, ಬೈಂದೂರಿನ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿಯವರನ್ನು ಗೆಲ್ಲಿಸಲು ಹಾಲಾಡಿ ಪಣತೊಟ್ಟಿದ್ದಾರೆ.
ಬಿಜೆಪಿ ಪ್ರಮುಖರಾದ ಜಿ.ಪಂ ಸದಸ್ಯ ಬಾಬು ಹೆಗ್ಡೆ ತಗ್ಗರ್ಸೆ, ಪ್ರಣಯ ಕುಮಾರ ಶೆಟ್ಟಿ , ತಾ. ಪಂ. ಸದಸ್ಯ ಪುಷ್ಪರಾಜ ಶೆಟ್ಟಿ , ತಾ.ಪಂ. ಉಪಾಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ, ಉಪ್ಪುಂದ ಸುರೇಶ್ ಶೆಟ್ಟಿ ಮೊದಲಾದವರ ಜತೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಬೈಂದೂರಿನಲ್ಲಿ ಗೆಲುವು ಸಾಧಿಸಬಾರದು, ಆ ನಿಟ್ಟಿನಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವೊಲಿಸಿದ್ದಾರೆ.ಹಾಲಾಡಿ ಅವರ ಜತೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಇದ್ದರು ಎನ್ನಲಾಗಿದೆ. ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಅವರು ಗೆಲ್ಲಬೇಕು, ಕುಂದಾಪುರದಲ್ಲಿ ಹಾಲಾಡಿ ಅವರು ಗೆಲ್ಲಬೇಕು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮೋದಿ, ಅಮಿತ್ ಷಾ ಪಣತೊಟ್ಟಿದ್ದಾರೆ. ಒಂದುವೇಳೆ ಯಾವುದೋ ಕಾರಣ ಹೇಳಿ ನಾವು ಕಾಂಗ್ರೆಸ್‌ಗೆ ಮತ ನೀಡಿದರೆ ಕಾಂಗ್ರೆಸ್‌ನವರು ಮೋದಿಜಿಗೆ ಅವಮಾನ ಮಾಡುತ್ತಾರೆ. ಅವರನ್ನು ಹೀಯಾಳಿಸುತ್ತಾರೆ. ಮೋದಿಜೀ ಸೋತರೆ ಪಾಕಿಸ್ಥಾನದಲ್ಲೂ ಪಟಾಕಿ ಸದ್ದಾಗುತ್ತದೆ, ದೇಶದ ಗೆಲುವಿಗೆ, ಮೋದಿ ಕನಸಿನ ಭಾರತಕ್ಕೆ ಪ್ರತಿ ಬಿಜೆಪಿಯ ಗೆಲುವು ಅವಶ್ಯಕ. ಹಾಗಾಗಿ ನಾವು ಯೋಚಿಸಿ ಮತ ಚಲಾಯಿಸಬೇಕಾಗಿದೆ ಎಂದರು.