Advertisement
ಕೈಗಾರಿಕೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಸರುವಾಸಿಯಾದ ಮಣಿಪಾಲಕ್ಕೆ ಜನರು ವಿವಿಧೆಡೆಗಳಿಂದ ಆಗಮಿಸುತ್ತಿದ್ದಾರೆ. ಮಣಿಪಾಲದ ಟೈಗರ್ ಸರ್ಕಲ್ ಬಳಿ ಪ್ರಸ್ತುತ ಅಳವಡಿಸಲಾದ ಸಿಗ್ನಲ್‌ನಿಂದ ದಟ್ಟಣೆ ಕಂಡುಬಂದರೆ ಒಳ ರಸ್ತೆಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಉದ್ಭವಿಸತೊಡಗಿದೆ.
ಮಣಿಪಾಲದ ಟೈಗರ್ ಸರ್ಕಲ್ ಹೆಸರಿಗಷ್ಟೇ ಇದೆ. ಈ ಹಿಂದಿನ ಸರ್ಕಲ್ ತೆರವುಗೊಳಿಸಿದ ಬಳಿಕ ಸಿಗ್ನಲ್
ವ್ಯವಸ್ಥೆ ಮಾತ್ರ ಮಾಡಲಾಗಿದ್ದು, ಪ್ರಚಾರ ಜಾಹೀರಾತಿಗೆ ಮೀಸಲಿಟ್ಟಂತಿದೆ. ಈ ಭಾಗದಲ್ಲಿ ವೈಜ್ಞಾನಿಕ ರೀತಿಯ ಸರ್ಕಲ್‌ನಿರ್ಮಿಸಿದರೆ ಟ್ರಾಫಿ ಕ್ ದಟ್ಟಣೆಯೂ ಕಡಿಮೆಯಾಗಲಿದೆ, ಸಿಗ್ನಲ್ ವ್ಯವಸ್ಥೆಯೂ ಬೇಕೆಂದಿಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆರ್‌ಎಸ್‌ಬಿ ಭವನ
ಮಣಿಪಾಲದ ಕೈಗಾರಿಕಾ ಪ್ರದೇಶ, ಎಂಐಟಿ, ಟ್ರೀ ಪಾರ್ಕ್, ಹೆರಿಟೇಜ್ ವಿಲೇಜ್ ಸಂಪರ್ಕಕ್ಕೆ ಆರ್‌ಎಸ್‌ಬಿ ಸರ್ಕಲ್ ಮೂಲಕವೇ ಹಾದು ಹೋಗಬೇಕಿದೆ. ಹಗಲು ಹಾಗೂ ರಾತ್ರಿ ವೇಳೆ ವಾಹನಗಳು ಅತೀ ವೇಗದಿಂದ ಆಗಮಿಸುತ್ತಿವೆ. ಈ ಭಾಗದಲ್ಲಿ ಯಾವುದೇ ಸರ್ಕಲ್‌ಗಳಿಲ್ಲದ ಕಾರಣ ಸವಾರರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಆರ್‌ಎಸ್‌ಬಿ ಬಳಿ ಸರ್ಕಲ್ ನಿರ್ಮಿಸಿ ಸೂಚನ ಫಲಕಗಳನ್ನು ಅಳವಡಿಕೆ ಮಾಡಿದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
Related Articles
ಆರ್‌ಎಸ್‌ಬಿ ಭವನದಿಂದ ಮುಂದೆ ತೆರಳಿದಾಗ ಸಿಗುವ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ಒಂದು ರಸ್ತೆ ಅಲೆವೂರು ಹಾಗೂ ಮತ್ತೂಂದು ರಸ್ತೆ ಕೈಗಾರಿಕ ವಲಯದತ್ತ ತೆರಳುತ್ತದೆ. ಈ ಭಾಗದ ರಸ್ತೆಗಳಲ್ಲಿ ಹೊಂಡ-ಗುಂಡಿಗಳು ಬಿದ್ದಿರುವ ಕಾರಣ ಪ್ರಸ್ತುತ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತವೆ. ಶೀಘ್ರದಲ್ಲಿ ಈ ರಸ್ತೆ ದುರಸ್ತಿ ಕಾಣಲಿದ್ದು, ಈ ಸಂದರ್ಭ ಇಲ್ಲೊಂದು ಸರ್ಕಲ್ ನಿರ್ಮಿಸಿದರೆ ಅನುಕೂಲವಾಗಬಹುದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Advertisement
ಸರ್ಕಲ್ ಅತ್ಯಗತ್ಯಮಣಿಪಾಲ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ನಗರವಾಗಿದೆ. ಆದರೆ ಟ್ರಾμಕ್ ನಿರ್ವಹಣೆ ಸಹಿತ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಗರದ ಆಯ್ದ ಕಡೆಗಳಲ್ಲಿ ಸರ್ಕಲ್ ನಿರ್ಮಿಸುವ ಬಗ್ಗೆ ಸ್ಥಳೀಯಾಡಳಿತ ಹಾಗೂ ಇಲಾಖೆ ಗಮನಹರಿಸುವ ಅಗತ್ಯವಿದೆ.
-ಸುಧೀರ್ ನಾಯಕ್, ಸ್ಥಳೀಯ ನಿವಾಸಿ, ಮಣಿಪಾಲ