Advertisement

ಗೊಂದಲದ ಗೂಡಾಯ್ತು ಸಭೆ

01:18 PM Mar 04, 2018 | Team Udayavani |

ನಾಲತವಾಡ: ಸ್ಥಳೀಯ ಪಪಂ ಸಾಮಾನ್ಯಸಭೆಯಲ್ಲಿ ಮಹಿಳಾ ಸದಸ್ಯರಿಗೆ ಮುಖ್ಯಾಧಿಕಾರಿ ಏಕವಚನ ಬಳಸಿದ್ದಾರೆ
ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಸಭೆ ಗೊಂದಲ ಗೂಡಾಗಿ ಪರಿಣಮಿಸಿತು.

Advertisement

ಹಲವು ವಿಷಯಗಳನ್ನು ಚರ್ಚಿಸುವ ಹಿನ್ನಲೆಯಲ್ಲಿ ಶನಿವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಸಭೆಯ ನಡುವಳಿಕೆ
ವಿಷಯಗಳನ್ನು ಓದುತ್ತಿದ್ದ ವೇಳೆ ಮಹಿಳಾ ಸದಸ್ಯೆ ಸುಮಾ ಗಂಗನಗೌಡ ಮಧ್ಯ ಪ್ರವೇಶಿಸಿ ಈ ಮೊದಲು ನಾವು ಕೇಳಿದ ಅನುದಾನ ಬಳಕೆ, ಮನೆಗಳ ವಿತರಣೆ, ಇತರೆ ವಿಷಯಗಳಿಗೆ ಕಳೆದ ಹಲವು ಬಾರಿ ಮನವಿ ನೀಡಿದ್ದೇವೆ. ಅವುಗಳಿಗೆ ಇನ್ನು ಉತ್ತರವೇ ನೀಡಿಲ್ಲ, ಈಗೇಕೆ ನಮಗೆ ನಮ್ಮ ವಾರ್ಡ್‌ನ ಸಮಸ್ಯೆಗಳನ್ನು ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ರೋಷಗೊಂಡ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ
ಮಹಿಳಾ ಸದಸ್ಯರಿಗೆ ಏಕವಚನ ಬಳಸಿ ಅವುಗಳನ್ನು ಕೇಳುವ ಅವಶ್ಯಕತೆ ಇಲ್ಲ, ಇನ್ನೇನಿದ್ದರೂ ಇಂದಿನ ವಿಷಯ ಕೇಳಿ ಎಂದು ಉತ್ತರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ನೋರ್ವ ಮಹಿಳಾ ಸದಸ್ಯೆ ಲತಾ ಕಟ್ಟಿಮನಿ ಮೊದಲು ಮಹಿಳೆಯರಿಗೆ ಸರಿಯಾಗಿ ಮಾತನಾಡುವದನ್ನು ಕಲಿಯಬೇಕು. ನಮ್ಮ ವಾರ್ಡ್‌ನಲ್ಲಿ ಇದುವರೆಗೂ ಸರಿಯಾಗಿ ಅನುದಾನ ನೀಡಿಲ್ಲ, ಮನೆಗಳ ವಿತರಣೆಗೆ ಮಲತಾಯಿ ಧೋರಣೆ ತೋರುತ್ತಿದ್ದೀರಿ, ನಮಗೆ ಸರಕಾರದ ಹಕ್ಕು ಇಲ್ಲವೇ? ಈ ಹಿಂದೆ ಕೇಳಿದ ಲೆಕ್ಕ ಪತ್ರ ಕೊಟ್ಟು ಹೊಸದಾಗಿ
ಮಾತಾಡಿ ಎಂದು ನೇರವಾಗಿ ಪ್ರಶ್ನಿಸಿದರು. 

ಸಭೆ ಬಹಿಷ್ಕಾರ: ನೇರವಾಗಿ ಮುಖ್ಯಾಧಿಕಾರಿ ಅವರೊಂದಿಗೆ ವಾದಕ್ಕಿಳಿದ ಸದಸ್ಯರಾದ ಭೀಮಣ್ಣ ಗುರಿಕಾರ, ಲತಾ ಕಟ್ಟಿಮನಿ ಹಾಗೂ ಸುಮಾ ಗಂಗನಗೌಡ್ರ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಪಪಂನಲ್ಲಿ ಏಕಪಕ್ಷೀಯ ಆಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಾಧಿಕಾರಿಗೆ ಧಿಕ್ಕಾರ ಕೂಗಿದರು. ನಂತರ ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿಯೊಂದಿಗೆ ಸುಮಾರು ಒಂದು ಗಂಟೆ ಕಾಲ ವಾದ ವಿವಾದ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತು.
 
ಜೆಡಿಎಸ್‌ ಸದಸ್ಯರ ಕಡೆ ಗಮನ ಕೊಡದೇ ನೇರವಾಗಿ ಹೊರ ಹೋದ ಸಿಒ, ಸದಸ್ಯರ ಪ್ರತಿಭಟನೆಗೆ ಉತ್ತರ ಕೊಡದೇ ಅಲ್ಲಿಂದ ಸ್ಥಳ ಖಾಲಿ ಮಾಡಿದರು. 
ಎಚ್ಚರಿಕೆ: ಜೆಡಿಎಸ್‌ ಸದಸ್ಯರ ಕಡಗಣನೆ ವಿಷಯಕ್ಕೆ ಸಂಬಂಧಿಸಿದಂತೆ ಮುಂದಿನ ಸಭೆಯಲ್ಲೂ ಸಹ ನಾವು ಕೇಳಿದ ಅಭಿವೃದ್ಧಿ ಹಾಗೂ ಯೋಜನೆಗಳ ವಿಷಯಗಳಿಗೆ ಉತ್ತರ ನೀಡದಿದ್ದರೆ ಸಭೆ ನೆಡೆಸಲು ಬಿಡಲ್ಲ ಎಂದು ಸದಸ್ಯರು ಹೇಳಿದರು 

Advertisement

Udayavani is now on Telegram. Click here to join our channel and stay updated with the latest news.

Next