Advertisement

 ಕೋವಿಡ್‌ ನಿಯಮ ಪಾಲಿಸಿ ದೃಢತೆಯಿಂದ ಪರೀಕ್ಷೆ ಎದುರಿಸಿ

07:51 PM Apr 21, 2021 | Team Udayavani |

ಮುದ್ದೇಬಿಹಾಳ: ಕೊರೊನಾ ಆತಂಕದ ನಡುವೆಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸರ್ಕಾರದ ನಿಯಮ ಪಾಲಿಸುವುದರೊಂದಿಗೆ ಮುಂಬರುವ ಪರೀಕ್ಷೆಯನ್ನು ದೃಢ ನಿಶ್ಚಯ, ಆತ್ಮಸಾಕ್ಷಿಯಿಂದ ಎದುರಿಸಿ ಯಶಸ್ಸು ಪಡೆದುಕೊಳ್ಳಬೇಕು ಎಂದು ಬಿಜೆಪಿ ಧುರೀಣ, ಭಾರತ ಸರ್ಕಾರದ ನೋಟರಿ ಎಸ್‌.ಎಚ್‌. ಲೊಟಗೇರಿ ವಕೀಲರು ಹೇಳಿದರು.

Advertisement

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಪಂ ಸದಸ್ಯೆ ಚಂದ್ರಕಲಾ ಲೊಟಗೇರಿಯವರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ, ಶಾಲೆಗೆ ಮಾಸ್ಕ್, ಸ್ಯಾನಿಟೈಸರ್‌ ಮತ್ತು ಸ್ಪ್ರೆàಯರ್‌ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೊರೊನಾ 2ನೇ ಅಲೆ ಸಮುದಾಯಕ್ಕೆ ಹರಡತೊಡಗಿದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಜೀವನ ನಡೆಸಬೇಕಾದ ಕಾಲ ಬಂದಿದೆ.

ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಇವೆಲ್ಲ ಕೊರೊನಾ ಬರದಂತೆ ತಡೆಗಟ್ಟಬಹುದೇ ಹೊರತು ಶೇ. 100ರಷ್ಟು ಗ್ಯಾರಂಟಿ ನೀಡುವುದಿಲ್ಲ. ಹೀಗಾಗಿ ಎಲ್ಲರೂ ಅನವಶ್ಯಕವಾಗಿ ತಿರುಗಾಡದೆ ಮನೆಯಲ್ಲೇ ಇದ್ದು ನಿಯಮ ಪಾಲಿಸಿ ಸೋಂಕಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು. ಅತಿಥಿಯಾಗಿದ್ದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿ, ಕೊರೊನಾ ಮೊದಲನೇ ಅಲೆ 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಣಾಂತಿಕವಾಗಿತ್ತು. ಆದರೀಗ 2ನೇ ಅಲೆ ಎಲ್ಲ ವಯೋಮಾನದವರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುತ್ತಿದೆ.

ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಸೋಂಕು ತಗುಲಲು ಮುಖ್ಯ ಕಾರಣ. ಹೀಗಾಗಿ ಎಲ್ಲರೂ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು. ಪರಿಶುದ್ಧ ವಾತಾವರಣದಲ್ಲಿ ಅಭ್ಯಾಸ ಮಾಡಿ, ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ ಯಶಸ್ಸು ಗಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಶಿವಬಸು ಸಜ್ಜನ ಮಾತನಾಡಿ, 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿನ ಹಿರಿಯರ ಮನವೊಲಿಸಬೇಕು. ಮುಂದಿನ ತಿಂಗಳಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಹಾಕುವ ವಿಚಾರ ಸರ್ಕಾರ ಪ್ರಸ್ತಾಪಿಸಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಸದಸ್ಯರಾದ ಚಂದ್ರಶೇಖರ ಒಣರೊಟ್ಟಿ, ಮಹೆಬೂಬ ನಿಡಗುಂದಿ, ಶೇಖಪ್ಪ ಹೊಸಮನಿ, ಮುಖ್ಯಾಧ್ಯಾಪಕ ಇಂದಯ್ಯ ಮಠ, ಯುವ ಧುರೀಣ ಬಸವರಾಜ ಹುಲಗಣ್ಣಿ, ಮಲ್ಲಿಕಾರ್ಜುನ ಹೊಸಮನಿ, ರಾಮನಗೌಡ ಬಿರಾದಾರ, ಬಿ.ಬಿ. ಬಿರಾದಾರ, ಶಾಲೆ ಶಿಕ್ಷಕರು ಇದ್ದರು. ಶಿಕ್ಷಕ ಎನ್‌. ಎಂ. ಮುದಗಲ್ಲ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next