Advertisement
ಗುಂತಗೋಳ ಸೀಮಾದ ಮೀಸಲು ಅರಣ್ಯ ಪ್ರದೇಶ ಸರ್ವೇ ನಂ. 69ರಲ್ಲಿ ರೈತರು ಭೂಮಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದು, ಅದನ್ನು ತೆರವುಗೊಳಿಸಿ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲಾಖೆಯಿಂದ ಸಸಿ ನೆಡಲು ಗುಂಡಿಗಳನ್ನು ತೋಡಲಾಗಿತ್ತು. ಇವುಗಳನ್ನು ಮುಚ್ಚಿದ್ದಾರೆಂಬ ಮಾಹಿತಿ ಮೇರೆಗೆ ಭಾನುವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತೂಮ್ಮೆ ಗುಂಡಿ ತೋಡಿಸುವ ಕಾರ್ಯ ಕೈಗೊಂಡಿದ್ದರು. ಈ ವೇಳೆಸ್ಥಳಕ್ಕೆ ಬಂದ ರೈತರಾದ ಹನುಮಂತ, ಸಂಗವ್ವ, ಮೀಯಾಖಾನ್, ಗೌಸ್ ಸಾಬ ಇತರರು ಅರಣ್ಯ ಇಲಾಖೆ ಸಿಬ್ಬಂದಿ ಬಾಬನ್, ಹುಚ್ಚಪ್ಪ ಕುಂಬಾರ, ಶರಣಪ್ಪ, ದೇಸಾಯಿ, ಮಲ್ಲಿಕಾರ್ಜುನ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ
ವಾಹನದ ಗಾಜು ಪುಡಿಪುಡಿ ಮಾಡಿದ್ದಾರೆ ಎಂದು ಉಪವಲಯ ಅರಣ್ಯಾಧಿಧಿಕಾರಿ ಸಂಗಮೇಶ ಪಾಟೀಲ ದೂರು ನೀಡಿದ್ದಾರೆ. ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.