Advertisement

ಮನವಳಿಕೆ: ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆ

04:05 PM Dec 25, 2017 | Team Udayavani |

ಆಲಂಕಾರು: ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ದಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿದೆ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ನುಡಿದರು. ಪೆರಾಬೆ ಗ್ರಾಮದ ಮನವಳಿಕೆ 2ನೇ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡುತ್ತಿದ್ದರು.

Advertisement

ಇಂದಿನ ಈ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯವನ್ನು ಕಡಿಮೆಗೊಳಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಸಮಾಜವನ್ನು ಗೌರವಿಸುವ ಗುಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದು ಸಮಾಜಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಸಂಸ್ಕಾರಗಳನ್ನು ಕಲಿಸುವ ಕೇಂದ್ರಗಳಾಗಿ, ಭವಿಷ್ಯದ ದಿನದಲ್ಲಿ ಅಂಗನವಾಡಿ ಕೇಂದ್ರಗಳು ಸಮಾಜವನ್ನು ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸುವ ಕೇಂದ್ರಗಳಾಗಿ ಮೂಡಿಬರಲಿ ಎಂದು ಹಾರೈಸಿದರು.

ಬೇಡಿಕೆಯ ಮನವಿಗಳು ಅಗತ್ಯವಿಲ್ಲ
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಜತೆಗೆ ಸಮಾಜಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸುವುದ ನನ್ನ
ಕರ್ತವ್ಯವಾಗಿದೆ ಎಂದರು. ಪ್ರತೀ ಗ್ರಾಮದ ಅಭಿವೃದ್ಧಿಗೆ ನಾನಾ ಯೋಜನೆಗಳ ಮೂಲಕ ಅನುದಾನಗಳನ್ನು ಬಿಡುಗಡೆ ಮಾಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ತಮ್ಮ ಗ್ರಾಮಗಳಿಗೆ ತಲುಪಿಸುವ ಕರ್ತವ್ಯ ಕ್ಷೇತ್ರದ ಶಾಸಕರ ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಡಿಕೆಯ ಮನವಿಗಳು ಅಗತ್ಯವಿಲ್ಲ ಎಂದರು.

ಇದೇ ವೇಳೆ ಅಂಗನವಾಡಿ ಕೇಂದ್ರಕ್ಕೆ ಆವರಣಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವುದಾಗಿ ಘೋಷಿಸಿದರು. ಶೀಘ್ರವೇ ಎಂಜಿನಿಯರನ್ನು ಕಳುಹಿಸಿ ಅಂದಾಜುಪಟ್ಟಿ ತಯಾರಿಸಿ ಕೊಡಲು ಸೂಚಿಸುವುದಾಗಿ ಭರವಸೆಯಿತ್ತರು.

ಮುಖ್ಯ ಅಥಿತಿಗಳಾಗಿ ಗುತ್ತಿಗಾರು ಕ್ಷೇತ್ರದ ಜಿಲ್ಲಾ ಪಂಚಾಯತ್‌ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ತಾ.ಪಂ. ಸದಸ್ಯೆ ತಾರಾ ತಿಮ್ಮಪ್ಪ, ಪೆರಾಬೆ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಜನಾರ್ದನ ಶೆಟ್ಟಿ, ಸದಸ್ಯರಾದ ಬಾಬು ಗೌಡ, ಚಂದ್ರಶೇಖರ ರೈ ಅಗತ್ತಾಡಿ, ವನಜಾ ಮರುವಂತಿಲ, ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಪೀರ್‌ ಮಹಮ್ಮದ್‌ ಸಾಹೇಬ್‌, ಸಿ.ಕೆ. ಅಬೂಬಕ್ಕರ್‌, ವಿಜಯ ಕುಮಾರ್‌ ರೈ ಮನವಳಿಕೆ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಮ್ಮಾನ
ಅಂಗನವಾಡಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಸಹಕರಿಸಿದ ರವಿಶಂಕರ್‌ ಕುಪ್ಲಾಜೆ, ನಿವೃತ್ತ ಅಂಗನ
ವಾಡಿ ಕಾರ್ಯಕರ್ತೆ ಚಂದ್ರಾವತಿ ಜೆ. ರೈ, ನೇಮಿರಾಜ ಕಲ್ಲಡ್ಕ, ಅಂಗನವಾಡಿ ಸಹಾಯಕಿ ಸುಂದರಿ ಸಿ.ಕೆ., ಆಬೂಬಕ್ಕರ್‌, ಇಬ್ರಾಹಿಂ ಪ್ರದೀಪ್‌ ರೈ ಮನವಳಿಕೆ, ವಿಜಯ್‌ ಕುಮಾರ್‌ ರೈ ಮನವಳಿಕೆ, ಲಲಿತಾ ಎಣ್ಣೆತ್ತೋಡಿ, ಸುಧೀರ್‌ ರೈ ಮರುವಂತಿಲ, ಸುಂದರ ಭಂಡಾರಿ ಕುಪ್ಲಾಜೆ, ಗೀತಾ ಕುಪ್ಲಾಜೆ, ಲಿಂಗಪ್ಪ ಪೂಜಾರಿ ಮಾಯಿಲ್ಗ, ಕುಂಞ ಮುಗೇರ ಜರಿಗುಂಡಿ ಅವರನ್ನು ಸಮ್ಮಾನಿಸಲಾಯಿತು. ಅಂಗನವಾಡಿ ಮೆಲ್ವೀಚಾರಕಿ ಭವಾನಿ ಸ್ವಾಗತಿಸಿದರು. ಕಾರ್ಯಕರ್ತೆ ಶಾಲಿನಿ ವರದಿ ಮಂಡಿಸಿದರು. ಪ್ರದೀಪ್‌ ರೈ ಮನವಳಿಕೆ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next