Advertisement
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬುಧವಾರ ನೂತನವಾಗಿ ನಿರ್ಮಾಣಗೊಂಡ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಅವರು ಶಾಲೆಯ ಪ್ರತಿ ಅಭಿವೃದ್ಧಿ ಕಾರ್ಯಗಳು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿರುತ್ತವೆ. ಕಾಲೇಜು ಆವರಣದಲ್ಲಿ ಸಾಧನೆಗೆ ಪೂರಕ ಅವಕಾಶ ಒದಗಿಸಲಾಗಿದ್ದು, ಸದುಪಯೋಗಿಸುವ ಕೆಲಸ ನಿಮ್ಮದು ಎಂದು ಕಿವಿಮಾತು ಹೇಳಿದರು.
Related Articles
ಕಾಲೇಜು ವತಿಯಿಂದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹಾಗೂ ಒಳಾಂಗಣ ಕ್ರೀಡಾಂಗಣ ರೂವಾರಿಗಳಾದ ಎಂಜಿನಿಯರ್, ವಿನ್ಯಾಸಕಾರರು ಸಹಿತ ಪ್ರಮುಖ ಕೆಲಸಗಾರರು, ಪೋಷಕ ಪ್ರತಿನಿಧಿಗಳು, ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಎಲಿಯಾಸ್ ಪಿಂಟೋ, ದಾನಿಗಳನ್ನು ಸಮ್ಮಾನಿಸಲಾಯಿತು.
Advertisement
ಅಮ್ಮೆಂಬಳ ಸೈಂಟ್ ತೋಮಸ್ ಚರ್ಚ್‌ನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನ್ಹಸ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ಜೊರೋಮ್ ಡಿ’ಸೋಜಾ, ಮಡಂತ್ಯಾರು ಗ್ರಾ. ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೆ., ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ಮಾಧವ ಗೌಡ, ರಾಜಶೇಖರ್ ಶೆಟ್ಟಿ, ರೊನಾಲ್ಡ್ ಸಿಕ್ವೇರಾ ಉಪಸ್ಥಿತರಿದ್ದರು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಶಿಕ್ಷಣ ಸಂಸ್ಥೆಯ ಸಂಚಾಲಕ ವಂ| ಬೇಸಿಲ್ ವಾಸ್ ಸ್ವಾಗತಿಸಿದರು. ಕಾಲೇಜು ಶಿಕ್ಷಕ ಜೋಸೇಫ್ ನಿರೂಪಿಸಿದರು.
ಆಸ್ಪತ್ರೆ ಬದಲು ಕ್ರೀಡಾಂಗಣಕ್ಕೆ ಸಿಗಲಿ ಪ್ರಾಶಸ್ತ್ಯಸಾವಿರಾರು ಆಸ್ಪತ್ರೆ ನಿರ್ಮಿಸುವ ಹೊರತಾಗಿ ಹತ್ತಾರು ಕ್ರೀಡಾಂಗಣ ತೆರೆಯುವ ಕೆಲಸ ಸಮಾಜದಿಂದ ಆಗಬೇಕಿದೆ. ಆರೋಗ್ಯ ಸಂರಕ್ಷಣೆಗಾಗಿ ಜನ ಸಮಯ ಮೀಸಲಿರಿಸದ ಪರಿಣಾಮ ಸಣ್ಣ ವಯಸ್ಸಿಗೇ ಕಾಯಿಲೆ ಆಕ್ರಮಿಸುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರೀಡಾಂಗಣ ಅತ್ಯವಶ್ಯ. ಕರಾವಳಿ ಪ್ರದೇಶದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಕುರಿತು ಸರಕಾರ ಗಮನಹರಿಸಬೇಕಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.