Advertisement

ಗಣಿತ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಳ

05:30 PM Jul 06, 2018 | |

ಕುಷ್ಟಗಿ: ಗಣಿತ ವಿಷಯದ ಬಗ್ಗೆ ಇರುವ ಭಯವನ್ನು ಹೊಗಲಾಡಿಸಿ ವಿದ್ಯಾರ್ಥಿಗಳಲ್ಲಿ ಆತ್ಮಬಲವೃದ್ಧಿಗೆ ಗಣಿತ ಸ್ಪರ್ಧೆಗಳು ಪೂರಕವಾಗಿವೆ ಎಂದು ಅಕ್ಷರ ಫೌಂಡೇಶನ್‌ ಸಂಯೋಜಕ ಉಮೇಶ ಮೇಳಿ ಹೇಳಿದರು. ತಾಲೂಕಿನ ನಿಡಶೇಷಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಗಣಿತಾ ಕಲಿಕಾ ಆಂದೋಲನ, ಗ್ರಾಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಗಣಿತ ವಿಷಯದ ಬಗ್ಗೆ ಭಯ ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸರಳ ವಿಧಾನ, ಪರಿಕರಗಳ ಸಹಾಯದಿಂದ ಗಣಿತದ ಜ್ಞಾನ ನೀಡಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಈ ಸ್ಪರ್ಧೆ ಆಯೋಜಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವದಿಂದ ಗಣಿತ ವಿಷಯದ ಬಗ್ಗೆ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ. ಗ್ರಾಪಂಗಳು ಅಭಿವೃದ್ಧಿ ಕೈಗೊಳ್ಳುವ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೂ ಶ್ರಮಿಸಬೇಕು ಎಂದರು. ಶಿಕ್ಷಕ ಬಸೆಟೆಪ್ಪ ಮಾತನಾಡಿ, ಇಂತಹ ಪರೀಕ್ಷೆಗಳಿಂದ ಮಕ್ಕಳಿಗೆ ಪರೀಕ್ಷೆ ಬರೆಯುವ ಜ್ಞಾನ ಹೆಚ್ಚಿಸುವುದಲ್ಲದೇ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತಯಾರಿಗೆ ಸಹಾಯವಾಗುತ್ತದೆ ಎಂದರು.

Advertisement

ಮುಖ್ಯಶಿಕ್ಷಕ ಶಿವಾನಂದ ಪಂಪಣ್ಣನವರ್‌ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಯಂಕಮ್ಮ ತಳವಾರ ಸ್ಪರ್ಧೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ತಾಪಂ ಸದಸ್ಯ ಚನ್ನಪ್ಪ ಮೇಟಿ, ಗ್ರಾಪಂ ಸದಸ್ಯರಾದ ಶರಣಪ್ಪ ಹಾವರಗಿ, ಲಕ್ಷ್ಮವ್ವ ಭಜಂತ್ರಿ, ಕನಕಮ್ಮ ಭಜಿ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಪ್ಪ ಹಾವರಗಿ, ಸದಸ್ಯರಾದ ಶಾಂತಮ್ಮ ತುಗ್ಗಲದೋಣಿ, ನಾಗಮ್ಮ ಮೇಟಿ, ಸಹಶಿಕ್ಷಕರಾದ ಶಶಿಕಲಾ ಪಾಟೀಲ, ಶಶಿಕಲಾ ಅಂಗಡಿ, ವಾಣಿಶ್ರೀ, ಕವಿತಾ, ನಂದಾ ಜೋಷಿ, ಮಾನಪ್ಪ, ದೈಹಿಕ ಶಿಕ್ಷಕ ಕಾಳಪ್ಪ ಭಂಡಾರಿ, ಶರಣಪ್ಪ ಪೊಲೀಸಪಾಟೀಲ ಇತರರಿದ್ದರು. 

ವಿಜೇತರು: ಸ್ಪರ್ಧೆಯ 4ನೇ ತರಗತಿ ವಿಭಾಗದಲ್ಲಿ ವಣಗೇರಾ ಶಾಲೆಯ ಚನ್ನಬಸವ (ಪ್ರಥಮ), ಮಂಜುನಾಥ (ದ್ವಿತೀಯ), ಶಾಂತಾ ಹಿರೇಮನಿ (ತೃತೀಯ) ಸ್ಥಾನಗಳಿಸಿದರು. 5ನೇ ತರಗತಿ ವಿಭಾಗದಲ್ಲಿ ನಿಡಶೇಷಿ ಶಾಲೆಯ ಕೆ. ಭೀಮಾಶಂಕರ (ಪ್ರಥಮ), ಪ್ರತಿಬಾ (ದ್ವಿತೀಯ), ಶಿಲ್ಪಾ (ತೃತೀಯ) ಸ್ಥಾನ ಪಡೆದರು. 6ನೇ ತಗರತಿ ವಿಭಾಗದಲ್ಲಿ ವಣಗೇರಾ ಶಾಲೆಯ ರಾಧಿಕಾ (ಪ್ರಥಮ), ಅಂಬಿಕಾ (ದ್ವಿತೀಯ), ಗಾಯತ್ರಿ (ತೃತೀಯ) ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next