Advertisement
ಪ್ರಯಾಣಿಕರಿಂದ ಸಪ್ರೈಸ್ಉಡುಪಿ-ಮಂಗಳೂರು ಖಾಸಗಿ ಬಸ್ಸೊಂದರ ನಿರ್ವಾಹಕ ಸುರೇಶ್ ಸಾನಾಡಿ ಸ್ನೇಹ ಜೀವಿ, ಎಲ್ಲ ಪ್ರಯಾಣಿ ಕರನ್ನು ಗೌರವದಿಂದ ಕಾಣುವವರು. ಹೀಗಾಗಿ ಅನೇಕ ಪ್ರಯಾಣಿಕ ಮಿತ್ರರನ್ನು ಹೊಂದಿದ್ದಾರೆ. ಮೂರು ವರ್ಷಗಳಿಂದ ಇದೇ ಬಸ್‌ನಲ್ಲಿ ಮಂಗಳೂರಿಗೆ ತೆರಳುವ ಪ್ರಯಾಣಿಕರ ಗುಂಪು ಶುಕ್ರವಾರ ಈ ವಿಭಿನ್ನ ಆಚರಣೆ ನಡೆಸಿ ಅವರಿಗೆ ಅಚ್ಚರಿ ಉಂಟು ಮಾಡಿತು. ಬಸ್ ಶುಕ್ರವಾರ ಬೆಳಗ್ಗೆ ಉಡುಪಿ ಬಿಟ್ಟು ಪಡುಬಿದ್ರಿ ತಲುಪುವ ಹೊತ್ತಿಗೆ ಕೇಕ್ ಕತ್ತರಿಸಿ ಶುಭ ಕೋರಿದರು. ಬಳಿಕ ಉಳಿದ ಪ್ರಯಾ ಣಿಕರಿಗೆ ಸಿಹಿ ಹಂಚಲಾಯಿತು.
ಸುರೇಶ್ ಸಾನಾಡಿ, -ಬಸ್ ನಿರ್ವಾಹಕರು 3 ವರ್ಷಗಳಿಂದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೇವೆ. ಹೀಗಾಗಿ ನಿರ್ವಾಹಕರಲ್ಲಿ ಆತ್ಮೀಯತೆ ಬೆಳೆದಿದೆ. ಕಳೆದ ಬಾರಿ ಅವರು ಮದುವೆ ವಾರ್ಷಿಕೋತ್ಸವದ ಬಗ್ಗೆ ತಿಳಿಸಿದ್ದರು. ಈ ಬಾರಿ ಪ್ರಯಾಣಿಕ ಸ್ನೇಹಿತರು ಸೇರಿ ಈ ಸಪ್ರೈಸ್ ಸಂಭ್ರಮ ನೀಡಿದರು.
ಸಂತೋಷ್ ಶೇಟ್ , -ಬಸ್ ಪ್ರಯಾಣಿಕರು