Advertisement

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸಬೂಬು

04:39 PM Aug 14, 2021 | Team Udayavani |

ರಾಮನಗರ: ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರ ಸಬೂಬು ಹೇಳುತ್ತಿದೆ ಎಂದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಜ್ವಲ್‌ ರೇವಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ಮೇಕೆದಾಟು ಯೋಜನೆಗೆ ಕಾವೇರಿ ಕೊಳ್ಳದ ಎಲ್ಲಾ ರಾಜ್ಯಗಳ ಅನುಮತಿ ಬೇಕು ಎಂಬ ಹೇಳಿಕೆಗೆ ಅವರು ತಿರುಗೇಟು ನೀಡಿದರು.

ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದಾಗಿ, ಅವರೇ ಡಿ.ಪಿ.ಆರ್‌ ಸಿದ್ಧಮಾಡುವಂತೆ ತಿಳಿಸಿದ್ದರು. ರಾಜ್ಯದ ಪರವಾಗಿ ಎಲ್ಲಾ ದಾಖಲೆಗಳನ್ನು ಅವರ ಮುಂದಿಟ್ಟ ನಂತರ ಅವರು ಸಬೂಬು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಡವಳಿಕೆ ರಾಜ್ಯದ ಜನರಿಗೆ ದ್ರೋಹ ಬಗೆದಂತೆ ಆಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯವಾದರೆ ದೇಶದ ಭವಿಷ್ಯಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ

ಕಾರ್ಯರೂಪಕ್ಕೆ ಬರಲಿ: ಜಲಾಶಯ ನಿರ್ಮಾಣಕ್ಕೆ ಯಾವ ರಾಜ್ಯದ ಅಪ್ಪಣೆಯೂ ಬೇಕಿಲ್ಲ ಎಂದು ಸಿಎಂಮತ್ತು ನೀರಾವರಿ ಸಚಿವರು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ. ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಈಗಾಗಲೆ ಸಮಯವನ್ನು ವ್ಯರ್ಥ ಮಾಡಿದ್ದೇವೆ . ಯೋಜನೆ ಅನುಷ್ಠಾನವಾಗ ಬೇಕಾಗಿದೆ ಎಂದರು.

Advertisement

ರಾಷ್ಟ್ರಪತಿಗಳು ಸೂಚನೆ ಕೊಡಲಿ: ಮೇಕೆದಾಟಿನಲ್ಲಿ ಜಲಾಶಯ ನಿರ್ಮಾಣ ಕುರಿತಂತೆ ಜೆಡಿಎಸ್‌ ಪಕ್ಷದ ಪರವಾಗಿ ತಾವು ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ, ಅಗತ್ಯತೆ ಮತ್ತು ಮನವಿಯನ್ನು ಕೊಟ್ಟಿರುವುದಾಗಿ, ರಾಷ್ಟ್ರಪತಿಗಳ ಗಮನಕ್ಕೂ ತರುವಂತೆ ತಿಳಿಸಿರುವುದಾಗಿ. ಜಲಾಶಯ ನಿರ್ಮಾಣ ವಿಚಾರದಲ್ಲಿ ರಾಷ್ಟ್ರಪತಿಗಳು ರಾಜ್ಯಕ್ಕೆ ಸೂಚನೆ ಕೊಡಬೇಕಾಗಿದೆ ಎಂದರು.

ಕನ್ನಡಮ್ಮ ಉಳಿದರೆ, ಭಾರತ ಮಾತೆ ಉಳಿವು: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ವಿರುದ್ಧ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸಿ.ಟಿ.ರವಿ ಅವರ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ಸಿ.ಟಿ ರವಿಯವರು ತಾವುಕನ್ನಡಿಗರು ಎಂಬುದನ್ನು ಮರೆತುಬಿಟ್ಟಿದ್ದಾರೆ. ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಕನ್ನಡ ತಾಯಿಯನ್ನು ಉಳಿಸಿಕೊಂಡರೆ, ಭಾರತಾಂಬೆಯನ್ನು ಉಳಿಸಿಕೊಳ್ಳಲು ಸಾಧ್ಯ, ಈ ವಿಚಾರವನ್ನು ಸಿ.ಟಿ.ರವಿಯವರು ಅರಿಯಬೇಕು ಎಂದರು.

ಎಸ್‌ಪಿಯವರ ಗಮನಕ್ಕೆ: ಚನ್ನಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ದೂರುಗಳ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ಈ ವಿಚಾರದಲ್ಲಿ ತಾವು ಎಸ್ಪಿಯವರ ಬಳಿ ಮಾತನಾಡಿರುವುದಾಗಿ. ತಮಗೆ ಬಂದ ಮಾಹಿತಿಗಳ ಬಗ್ಗೆಯೂ ಅವರ ಗಮನಕ್ಕೆ ತಂದಿ ರುವುದಾಗಿ, ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ತಿಳಿಸಿರುವುದಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಪ್ರಮುಖರಾದ ಬಿ.ಉಮೇಶ್‌, ಜಯಕುಮಾರ್‌ ಮತ್ತಿತರರು ಹಾಜರಿದ್ದರು.

ತಾವು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿದ್ದಾಗಿ, ಅವರೇ ಡಿ.ಪಿ.ಆರ್‌ ಸಿದ್ಧಮಾಡುವಂತೆ ತಿಳಿಸಿದ್ದರು. ರಾಜ್ಯದ ಪರವಾಗಿ ಎಲ್ಲಾ ದಾಖಲೆ ಅವರ ಮುಂದಿಟ್ಟ ನಂತರ ಅವರು ಸಬೂಬು ಹೇಳುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯವಾದರೆ ದೇಶದ ಭವಿಷ್ಯಕ್ಕೆ ಮಾರಕ.
ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next